ವಿಶ್ವದಾದ್ಯಂತ 2023ಕ್ಕೆ ವಿದಾಯ ಹೇಳಿ, 2024ರ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತಿದೆ. ಈ ಸಂಭ್ರಮಕ್ಕೆ ಕೈಜೋಡಿಸಿರುವ ಗೂಗಲ್, ವಿಶಿಷ್ಟ ಕಸ್ಟಮೈಸ್ಟ್ ಆ್ಯನಿಮೇಟೇಡ್ ಡೂಡಲ್ ಮೂಲಕ ಗಮನ ಸೆಳೆದಿದೆ.
ಗೂಗಲ್ ಹೊಸ ವರ್ಷವನ್ನು ರೋಮಾಂಚಕ ಡೂಡಲ್ನೊಂದಿಗೆ ಆಚರಿಸಿದೆ. ಮಿನುಗುವ ಡಿಸ್ಕೊ ಚೆಂಡುಗಳು, ಬಣ್ಣ ಬಣ್ಣದ ಅಂಶಗಳು ಸಂಭ್ರಮವನ್ನು ಬಿಂಬಿಸಿವೆ.
“3… 2… 1… ಹೊಸ ವರ್ಷದ ಶುಭಾಶಯಗಳು!” ಎಂದು ಗೂಗಲ್ ಶುಭ ಕೋರಿದೆ. ಈ ಡೂಡಲ್ ಹೊಸ ವರ್ಷವನ್ನು ಪ್ರಾರಂಭಿಸಲು ಹೊಸ ಹುರುಪನ್ನು ನೀಡುತ್ತದೆ! ಮಧ್ಯರಾತ್ರಿಯಿಂದ ಪ್ರಪಂಚದಾದ್ಯಂತದ ಜನರು ತಮ್ಮ ಹೊಸ ವರ್ಷದ ಸಂಕಲ್ಪ ಮತ್ತು ಯಶಸ್ಸು, ಪ್ರೀತಿ, ಸಂತೋಷ ಎಲ್ಲದಕ್ಕಾಗಿ ಶುಭ ಕೋರಲು ಪ್ರಾರಂಭಿಸಿದ್ದಾರೆ ಎಂದು ಬರೆಯಲಾಗಿದೆ.
ಜಗತ್ತಿನ ಕೋಟ್ಯಂತರ ಜನರು ಪಟಾಕಿ ಮತ್ತು ಹಬ್ಬದ ಬೆಳಕಿನ ಸಂಭ್ರಮದೊಂದಿಗೆ 2023ಕ್ಕೆ ವಿದಾಯ ಹೇಳಿ, 2024ಕ್ಕೆ ಹೊಸ ವರ್ಷ ಆರಂಭದ ಮುನ್ನಾದಿನವಾದ ಭಾನುವಾರ ಮಧ್ಯರಾತ್ರಿಯಿಂದಲೇ ಸಂಭ್ರಮಾಚರಣೆ ಮಾಡಿದ್ದರು.