ಬಾಗಲಕೋಟೆ:- ಜಿಲ್ಲೆಯಲ್ಲಿ ಧರ್ಮಸ್ಥಳದ ಸೇವಾ ಸಮಿತಿಯಿಂದ
ಮಹಿಳೆಯರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡ್ತಾಇದ್ದಿದ್ದು ನಮಗೆ ಹೆಮ್ಮೆಯ ಸಂಗತಿ.
ಧರ್ಮಸ್ಥಳದ ವಿವಿಧ ಸಂಸ್ಥೆಗಳಿಂದ ಮಹಿಳೆಯರಿಗೆ ಸಹಾಯಧನ ನೀಡುವುದರ ಜೊತೆಗೆ ಅವರ ಕೈಗಳನ್ನು ಬಲಪಡಿಸುವ ಕೆಲಸ ಮಾಡ್ತಾ ಇದೆ.
ಮಹಿಳೆ ಅಬಲೆ ಅಲ್ಲ ಸಬಲೆಯಾಗಿ ಬದುಕುತ್ತಿದ್ದಾಳೆ.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬಂತೆ ಮಕ್ಕಳು ಇರುವಾಗಲೇ ತಾಯಂದಿರು ಭಾರತ ದೇಶದ ಸಂಸ್ಕೃತಿ ಬಗ್ಗೆ ದೇಶದ ಗೌರವ ಬಗ್ಗೆ ತಿಳಿ ಹೇಳುವ ಕೆಲಸ ಮಾಡಬೇಕಾಗಿದೆ ಪ್ರತಿಯೊಂದು ತಾಯಂದಿರ ಮೇಲೆ ಈ ಜವಾಬ್ದಾರಿ ಇದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪುರ ನಗರದ ಶ್ರೀ ಮಲ್ಲಿಕಾರ್ಜುನ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ ಜಮಖಂಡಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಪರಮ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೋಶ್ರೀ ಡಾ ಹೇಮಾವತಿ ಹೆಗ್ಗಡೆಯವರು ಶುಭಾಶೀವಾದಗಳೊಂದಿಗೆ ತಾಲ್ಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಶ್ರೀಮತಿ ವಿದ್ಯಾ ಧಬಾಡಿ ಅಧ್ಯಕ್ಷರು ನಗರಸಭೆ ರಬಕವಿ ಬನಹಟ್ಟಿ. ಶ್ರೀಮತಿ ಡಾ.ನೀಲಿಮಾ ಕಾಗಿ ವೈದ್ಯಾಧಿಕಾರಿ ತೇರದಾಳ ಬಸವಪ್ರಭು ಹಟ್ಟಿ. ಚೆನ್ನಕೇಶವ ನಿರ್ದೇಶಕರು ಶ್ರೀ ಕ್ಷೇತ್ರ ಧ ಗ್ರಾ ಯೋಜನೆ ಬಿ ಸಿ ಟ್ರಸ್ಟ್ ಬಾಗಲಕೋಟೆ ಜಿಲ್ಲೆ. ನಿಂಗಪ್ಪ ಕ್ಷೇತ್ರ ಯೋಜನೆ ಅಧಿಕಾರಿಗಳು.
ಶ್ರೀದೇವಿ ಎಸ್ ವಯ್ ಜ್ಞಾನವಿಕಾಸ ಸಮನ್ವಯ ಅಧಿಕಾರಿಗಳು. ಶಿವಾನಂದ ಎಂ ವಯ್ ಮೇಲ್ಚಲಕರು ಬನಹಟ್ಟಿ. ಮಂಜುಳಾ ಮೇಲ್ಚಲಕರು ರಬಕವಿ. ಶಿವಲೀಲಾ ಮೇಲ್ಚಲಕರು ರಾಂಪುರ. ಶೈಲಜಾ ಹೊಸಕೋಟೆ ಸೇವಾ ಪ್ರತಿನಿಧಿ. ಶ್ರೀದೇವಿ. ಪಾರ್ವತಿ. ಜ್ಯೋತಿ ಸೇರಿದಂತೆ ಮುಂತಾದವು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ