IPL ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲಾ ಪ್ರಾಂಚೈಸಿಗಳು ಸಿದ್ಧತೆ ಕೈಗೊಂಡಿದೆ. IPL ಆರಂಭಕ್ಕೂ ಮುನ್ನವೇ ಕೆಲವೇ ದಿನಗಳ ಹಿಂದೆ ಇಂಜುರಿಗೆ ತುತ್ತಾಗಿದ್ದ ಇಂಗ್ಲೆಂಡ್ನ ಉದಯೋನ್ಮುಖ ಬ್ಯಾಟ್ಸ್ಮನ್ ಜಾಕೋಬ್ ಬೆಥೆಲ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆರ್ಸಿಬಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ತಂಡದ ಪರ ಕಣಕ್ಕಿಳಿಯಲು ಸ್ಟಾರ್ ಆಟಗಾರ ಸಜ್ಜಾಗಿದ್ದಾರೆ.
ಉತ್ತರ ಕರ್ನಾಟಕ ಅಭಿವೃದ್ದಿಗೆ ಬಜೆಟ್ನಲ್ಲಿ ವಿಶೇಷ ಆದ್ಯತೆ ನೀಡಲು ಒತ್ತಾಯ: ಅರವಿಂದ ಬೆಲ್ಲದ
ವಾಸ್ತವವಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಸಮಯದಲ್ಲಿ ಬೆಥೆಲ್ ಗಾಯಗೊಂಡಿದ್ದರು. ಇದರಿಂದಾಗಿ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡದ ಭಾಗವಾಗಿರಲಿಲ್ಲ. ಹೀಗಾಗಿ ಐಪಿಎಲ್ಗೂ ಮುನ್ನ ಬೆಥೆಲ್ ಗುಣಮುಖರಾಗುತ್ತಾರೋ? ಇಲ್ಲವೋ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿತ್ತು.
ಐಪಿಎಲ್ ಮೆಗಾ ಹರಾಜಿನಲ್ಲಿ ಜಾಕೋಬ್ ಬೆಥೆಲ್ರನ್ನು ಖರೀದಿಸಲು ಆರ್ಸಿಬಿ ಸಾಕಷ್ಟು ಹಣವನ್ನು ಖರ್ಚು ಮಾಡಿತ್ತು. ಅಂತಿಮವಾಗಿ ಅವರನ್ನು 2.6 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದಾಗ್ಯೂ, ಭಾರತೀಯ ನೆಲದಲ್ಲಿ ಬೆಥೆಲ್ ಅವರ ಪ್ರದರ್ಶನ ವಿಶೇಷವಾಗಿರಲಿಲ್ಲ.
ಭಾರತದ ನೆಲದಲ್ಲಿ ನಡೆದ ಟಿ20 ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜಾಕೋಬ್ ಬೆಥೆಲ್ 7.66 ರ ಸರಾಸರಿ ಮತ್ತು 76 ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 23 ರನ್ಗಳನ್ನು ಮಾತ್ರ ಕಲೆಹಾಕಿದ್ದರು. ಆದಾಗ್ಯೂ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ, ಬೆಥೆಲ್ 51 ರನ್ಗಳ ಬಲವಾದ ಇನ್ನಿಂಗ್ಸ್ ಆಡಿದರು.
ನಂತರ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದ ಬೆಥೆಲ್ ಇದರಿಂದಾಗಿ ಏಕದಿನ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದರು. ಇದೇ ಗಾಯದಿಂದಾಗಿ ಬೆಥೆಲ್ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಇಂಗ್ಲೆಂಡ್ ತಂಡದ ಭಾಗವಾಗಿರಲಿಲ್ಲ.