ಬೆಂಗಳೂರು:- ಸೂರು ಇಲ್ಲದವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ವಸತಿ ಸೌಲಭ್ಯ ಯಾರು ಹೊಂದಿಲ್ಲ ಅಂತವರಿಗೆ ಸರಕಾರದ ವತಿಯಿಂದ ಉಚಿತ ವಸತಿ ಯೋಜನೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ವಸತಿ ರಹಿತ ಮತ್ತು ಆರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ ಉಚಿತ ವಸತಿ ಯೋಜನೆಯನ್ನು ಕಲ್ಪಿಸಲಾಗಿದ್ದು ಈ ಯೋಜನೆಯನ್ನು ಕರ್ನಾಟಕ ಸರ್ಕಾರವು ಜಾರಿಗೆ ತಂದಿದೆ.
Job Alert: ಡಿಗ್ರಿ ಆಗಿದ್ರೆ ಸಾಕು.. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ʼನಲ್ಲಿದೆ ಉದ್ಯೋಗಾವಕಾಶ.!
ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ವಸತಿ ರೈತರಿಗೆ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಹಾಗೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತೆ ಮತ್ತು ದಾಖಲೆಗಳು ಏನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಅರ್ಜಿ ಸಲ್ಲಿಸುವುದು ಹೀಗೆ..!
ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ಜಿಲ್ಲೆ ಹಾಗೂ ತಾಲೂಕು ಹಾಗೂ ಹೋಬಳಿ ಆಯ್ಕೆ ಯನ್ನು ಮಾಡಿ.
ಮುಂದಿನ ಹಂತಗಳಲ್ಲಿ ನಿವಾಸದ ಪ್ರಮಾಣ ಪತ್ರ ಆರ್ಡಿ ಸಂಖ್ಯೆ ಮತ್ತು ಅರ್ಜಿದಾರರ ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ಸರಿಯಾದ ದಾಖಲೆಗಳನ್ನು ಅರ್ಜಿಯನ್ನು ಸಲ್ಲಿಸಿ.
ಮೇಲಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮೇಲಿನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ರಾಜೀವ್ ಗಾಂಧಿ ವಸತಿ ಯೋಜನೆ ಅರ್ಜಿ ಸಲ್ಲಿಸಬಹುದು ಮತ್ತು ನೀವು ಅರ್ಜಿ ಸಲ್ಲಿಸದಿದ್ದರೆ ನಿಮಗೆ ಉಚಿತ ಮನೆ ಸಿಗುತ್ತದೆ. ಹೀಗಾಗಿ ಸೂರು ಇಲ್ಲದ ಅರ್ಹ ಫಲಾನುಭವಿಗಳು ಅವಕಾಶ ಸದುಪಯೋಗ ಪಡಿಸಿಕೊಳ್ಳಿ.