ಬೆಂಗಳೂರು: ಕಂದಾಯ ಇಲಾಖೆ ಸಚಿವರಾಗಿರುವಂತಹ ಕೃಷ್ಣಬೈರೇಗೌಡರವರು ರೈತರಿಗೆ ತಿಳಿಸಿರುವ ಸಿಹಿ ಸುದ್ದಿ ಏನೆಂದರೆ, ಹಿಂದೆ ಹಲವಾರು ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಉಳಿಮೆ ಮಾಡುತ್ತಿರುವಂತಹ ಪ್ರತಿಯೊಬ್ಬ ರೈತರಿಗೂ ಕೂಡ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಇಲ್ಲಿಯವರೆಗೆ ಬಗರು ಹುಕುಂ ನಮೂನೆ ಐವತ್ತೇಳರ ಅಡಿಯಲ್ಲಿ ಒಟ್ಟಾರೆಯಾಗಿ 10 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು ಈ ಪೈಕಿ ಅರ್ಹತೆ ಹೊಂದಿಲ್ಲದವರ ಅರ್ಜಿಗಳ ಅಧಿಕವಾಗಿವೆ. ಈಗಾಗಲೇ ರಾಜ್ಯದಲ್ಲಿರುವಂತಹ 160 ಬಗಾರ್ ಹುಕುಂ ಸಮಿತಿಗಳಲ್ಲಿ ಅರ್ಜಿ ವಿಲೇಹರಿ ಆರಂಭವಾಗಿದ್ದು ಇನ್ನು ಎಂಟು ತಿಂಗಳಗಳಲ್ಲಿ ಎಲ್ಲಾ ಅರ್ಜಿಗಳ ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Health Care: ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಆಹಾರ ಮತ್ತು ಪಾನೀಯವನ್ನು ಮುಟ್ಟಲೇಬೇಡಿ!
ನಮ್ಮ ಒಂದು ರಾಜ್ಯದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮಟ್ಟದಲ್ಲಿ ಸುಮಾರು ನಾಲ್ಕು ಲಕ್ಷ ರೈತರಿಗೆ ಸಂಬಂಧಪಟ್ಟಂತಹ 70000 ಸರ್ವೆ ನಂಬರ್ ಗಳಲ್ಲಿ 1-5 ನಮೂನೆ ದಾಖಲೆಗಳನ್ನು ಪರಿಶೀಲಿಸಲಾಗಿದ್ದು ಅದಕ್ಕೆ ಸಂಬಂಧಪಟ್ಟಂತಹ ರೈತರ ಕಡತಗಳನ್ನು ತಯಾರು ಮಾಡುವಂತಹ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದೆ. ಈ ಪರಿಶೀಲನೆ ಮಾಡುವಂತಹ ಪ್ರಕ್ರಿಯೆಯಲ್ಲಿ ಯಾರು ಅರ್ಹತೆ ಹೊಂದಿರುತ್ತಾರೆ ಅವರಿಗೆ ನಮೂನೆ 6-10 ರ ಪ್ರಕ್ರಿಯೆಗೆ ಸರ್ವೆ ಇಲಾಖೆ ಕೋಡಿಗೆ ಸಿಫರೆಸು ಮಾಡಲಾಗುತ್ತದೆ ಅದಾದ ಮೇಲೆ ರೈತರಿಗೆ ಕೋಡಿ ಲಭ್ಯವಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ.