ಕೇಂದ್ರ ಸರ್ಕಾರದಿಂದ ಕರ್ನಾಟಕದಲ್ಲಿ 2024-25ರ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆಯು ಯೋಜನೆಯಡಿ ಉದ್ದು ಹಾಗೂ ಸೋಯಾಬೀನ್ ಖರೀದಿಗೆ ಭಾರತ ಸರ್ಕಾರದ ಕೃಷಿ ಸಚಿವಾಲಯ ಅನುಮತಿಯನ್ನು ನೀಡಿದ್ದು, ರೈತರಲ್ಲಿ ಸಂತಸವನ್ನು ಮೂಡಿದೆ.
ಮೊದಲನೇ ಬಾರಿಗೆ ಮೆಕ್ಕೆಜೋಳಕ್ಕೆ ಬಂಪರ್ ಬೆಲೆ : ರೈತರ ಮೊಗದಲ್ಲಿ ಮಂದಹಾಸ!
ಮುಕ್ತ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆ ಕಡಿಮೆ ಇರುವುದರಿಂದ MSP ಅಡಿಯಲ್ಲಿ ಉದ್ದು ಮತ್ತು ಸೋಯಾಬೀನ್ ಗಳಿಗೆ ಪ್ರತೀ ಕ್ವಿಂಟಾಲ್ ಗೆ ₹7,400 ಮತ್ತು ₹4,892 ಮೌಲ್ಯದಲ್ಲಿ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರೈತ ಪರ ಕ್ರಮವನ್ನು ಕೈಗೊಂಡಿದ್ದು ರಾಜ್ಯದ ರೈತರು ಬೆಳೆದ 19,760 MT ಉದ್ದಿನ ಬೇಳೆಯು ಮತ್ತು 1,03,315 MT ಸೋಯಾಬೀನ್ ಬೆಳೆಗಳನ್ನು ಖರೀದಿಯನ್ನು ಮಾಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈ ಮೂಲಕವಾಗಿ ರಾಜ್ಯದ ರೈತರ ಈ ಬೆಳೆಗಳನ್ನು ಬೆಲೆ ಬೆಂಬಲ ಯೋಜನೆ (PSS) ಅಡಿ ಖರೀದಿಗೆ ಅನುಮತಿ ನೀಡಿದೆ. ರಾಜ್ಯ ಸರ್ಕಾರವು ತಕ್ಷಣವೇ ರಾಜ್ಯಾದ್ಯಂತ ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿಯ ಪ್ರಕ್ರಿಯೆಗೆ ಚಾಲನೆಯನ್ನು ನೀಡಬೇಕೆಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮನವಿ ಮಾಡಿದ್ದಾರೆ.