ನಿರುದ್ಯೋಗ ಯುವಕರಿಗೆ ಸ್ವಯಂ ಉದ್ಯೋಗ ಆರಂಭಿಸಲು ಸಾಲ ಸೌಲಭ್ಯದ ಜೊತೆಗೆ ಸಹಾಯಧನ ನೀಡಲು ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವಂತಹ ವಿವಿಧ ನಿಗಮಗಳಿಂದ ಸಾಲ ಹಾಗೂ ಸಹಾಯಧನ ಸೌಲಭ್ಯವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಹೌದು ಯುವಜನತೆಗೆ ಉದ್ಯೋಗ ದೊರಕಿಸಿಕೊಡುವ ಪ್ರಮುಖ ಉದ್ದೇಶದೊಂದಿಗೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವಂತಹ ವಿವಿಧ ನಿಗಮಗಳಿಂದ ಸಾಲ ಹಾಗೂ ಸಹಾಯಧನ ಸೌಲಭ್ಯವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಯಾವ ಯಾವ ನಿಗಮಗಳಿಂದ ನೇರ ಸಾಲಕ್ಕೆ ಅರ್ಜಿ ಆಹ್ವಾನಿಸಲಾಗಿದೆ? ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಾಖಲಾತಿಗಳು ಹಾಗೂ ಅರ್ಹತೆಗಳ ಮಾಹಿತಿಯನ್ನು ಕೆಳಗೆ ವಿವರಿಸಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸ್ವಯಂ ಉದ್ಯೋಗ ಆರಂಭಿಸಲು ಘಟಕದ ವೆಚ್ಚವು 1 ಲಕ್ಷ ರೂಪಾಯಿ ಇದ್ದರೆ ಅಂತಹ ಅಭ್ಯರ್ಥಿಗಳಿಗೆ ರೂ. 20,000 ಸಹಾಯಧನ ನೀಡಲಾಗುತ್ತದೆ. ಉಳಿದ 80,000 ರೂ. ಹಣವನ್ನು ಬ್ಯಾಂಕಿನಿಂದ ಸಾಲದ ರೂಪದಲ್ಲಿ ನೀಡಲಾಗುತ್ತದೆ.
ಒಂದು ವೇಳೆ ಘಟಕದ ವೆಚ್ಚ 2 ಲಕ್ಷ ರೂಪಾಯಿ ಇದ್ದರೆ ರೂ.30,000 ಹಣವನ್ನು ಸಹಾಯಧನವಾಗಿ ನೀಡಲಾಗುತ್ತದೆ. ಉಳಿದ 1.7 ಲಕ್ಷ ರೂಪಾಯಿಯನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗಗಳಲ್ಲಿ ಬರುವಂತಹ ವಿವಿಧ 9 ನಿಗಮಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕನಿಷ್ಠ ಅರ್ಹತೆಗಳು:
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ರಿಂದ 55 ವರ್ಷದ ಒಳಗೆ ಇರಬೇಕು ಹಾಗೂ ಕನಿಷ್ಠ 7ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾರ್ಹತೆ ಹೊಂದಿರಬೇಕು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ದಾಖಲಾತಿಗಳು ಕಡ್ಡಾಯವಾಗಿರುತ್ತವೆ.
1. ಅಭ್ಯರ್ಥಿಯ ಆಧಾರ್ ಕಾರ್ಡ್
2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
3. ಬ್ಯಾಂಕ್ ಪಾಸ್ ಬುಕ್
4. ಶೈಕ್ಷಣಿಕ ಅಂಕ ಪಟ್ಟಿಗಳು
5. ಅಭ್ಯರ್ಥಿಯ ರೇಷನ್ ಕಾರ್ಡ್
ಅರ್ಜಿ ಸಲ್ಲಿಸಲು ಅರ್ಹರಿರುವ ಅಭ್ಯರ್ಥಿಗಳು ಹಾಗೂ ಆಸಕ್ತ ಅಭ್ಯರ್ಥಿಗಳು ನಿಮ್ಮ ಸಂಬಂಧಪಟ್ಟ ವರ್ಗದ ನಿಗಮಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.