ಬೆಂಗಳೂರು:- ದಿನದ 24 ಗಂಟೆಯೂ ಸೇವೆ ಸಲ್ಲಿಸುವವರ ಸಾಲಿಗೆ ಈ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರೂ ಸೇರಲಿದ್ದು, ಇಂತಹ ಸೇವೆ ಸಲ್ಲಿಸಿದ ಚಾಲಕರಿಗೆ ನಿಗಮ ಗುಡ್ ನ್ಯೂಸ್ವೊಂದನ್ನು ನೀಡಿದೆ.
ಆ ಶುಭಸುದ್ದಿ ಏನು ಅಂತೀರಾ ಇಲ್ಲಿದೆ ನೋಡಿ ಮಾಹಿತಿ. ರಾಜ್ಯದ ರಾಜಧಾನಿ ಬೆಂಗಳೂರಿನ ಎಲ್ಲಾ ಕಡೆಗಳಿಗೂ ಸಂಚಾರ ಮಾಡುತ್ತಿರುವ ಬಿಎಂಟಿಸಿ ನಿಗಮ ಇಡೀ ದೇಶದಲ್ಲೇ ಒಂದೊಳ್ಳೆ ಸಾರಿಗೆ ಸೇವೆ ಎನ್ನುವ ಪ್ರಖ್ಯಾತಿ ಹೊಂದಿದೆ. ಈ ಪ್ರಖ್ಯಾತಿ ಗಳಿಸಲು ಪ್ರಮುಖ ಕಾರಣರಾದವರು ಬಸ್ನಲ್ಲಿ ಕಾರ್ಯ ನಿರ್ವಹಿಸುವ ಚಾಲಕರು ಹಾಗೂ ಕಾರ್ಯ ನಿರ್ವಾಹಕರು ಆಗಿದ್ದಾರೆ. ಬೆಂಗಳೂರಿನಂಹತ ಮಹನಗರದಲ್ಲಿನ ಟ್ರಾಫಿಕ್ ಜಂಜಾಟದಲ್ಲಿ ಬಸ್ ಈ ಬಸ್ಗಳನ್ನು ಓಡಿಸುವುದು ಸುಲಭದ ಮಾತಲ್ಲ
ತೀವ್ರ ಗತಿಯ ಟ್ರಾಫಿಕ್ ನಡುವೆಯೂ ಪ್ರಯಾಣಿಕರನ್ನು ಯಾವುದೇ ತೊಂದರೆ ಇಲ್ಲಿದ ತಮ್ಮ ಸ್ಥಳಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದ್ದರಿಂದ ಇಂತಹ ಚಾಲಕರನ್ನ ಗುರುತಿಸಿರುವ ಬಿಎಂಟಿಸಿ ಪ್ರಮೋಷನ್ ಭಾಗ್ಯವನ್ನು ಕಲ್ಪಿಸಿದೆ. 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಂದುವರೆದಿರುವ 1,000 ಹೆಚ್ಚು ಚಾಲಕರಿಗೆ ಕೂಡಲೇ ಜಾರಿಯಾಗುವಂತೆ ಪ್ರಮೋಷನ್ ಕಲ್ಪಿಸಲಾಗಿದೆ. ಕೂಡಲೇ ಮುಂಬಡ್ತಿ ಅರ್ಜಿ ಸಲ್ಲಿಸುವಂತೆ ಬಿಎಂಟಿಸಿ ನಿಗಮ ಸುತ್ತೋಲೆಯಲ್ಲಿ ಬಿಎಂಟಿಸಿ ತಿಳಿಸಿದೆ