ಬಹುಸಂಖ್ಯಾತ ಐಟಿ ಇಂಜಿನಿಯರ್ಗಳಿಗೆ ಇನ್ಫೋಸಿಸ್ ನಲ್ಲಿ ಕೆಲಸಕ್ಕೆ ಸೇರುವುದು ಒಂದು ಕನಸು. ಅದು ನನಸಾಗಬೇಕು ಅಂದ್ರೆ ವಿದ್ಯಾರ್ಹತೆ ಜತೆಗೆ ಇಲ್ಲಿನ ಉದ್ಯೋಗ ಸಂದರ್ಶನದಲ್ಲಿ ಅಭ್ಯರ್ಥಿಗಳು ಪ್ರಾಕ್ಟಿಕಲ್ ಟೆಸ್ಟ್ಗೂ ತಯಾರಿ ಮಾಡಿಕೊಳ್ಳಬೇಕಿರುತ್ತದೆ. ಕಂಪನಿ ತನ್ನ ಬ್ಯುಸಿನೆಸ್ ಅಗತ್ಯತೆಗೆ ತಕ್ಕಂತೆ ಸೆಲೆಕ್ಷನ್ ಪ್ರೋಸೆಸ್ ಅನ್ನು ರೂಢಿಸಿಕೊಂಡಿದೆ.
ಬೃಹತ್ ಮಟ್ಟದಲ್ಲಿ ಹೊಸಬರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಇನ್ಫೋಸಿಸ್ ಕಂಪನಿ ಯೋಜನೆ ರೂಪಿಸಿದೆ ಎನ್ನುವ ಅಧಿಕೃತ ಮಾಹಿತಿ ಹೊರ ಬಿದ್ದಿದೆ.
ಇನ್ಫೋಸಿಸ್ ಸಂಸ್ಥೆ 20,000ಕ್ಕೂ ಹೆಚ್ಚು ಫ್ರೆಶರ್ ಅಭ್ಯರ್ಥಿಗಳನ್ನು ನೇಮಕ ಮಾಡಲು ಯೋಜನೆ ರೂಪಿಸಿದೆಯಂತೆ. 2026ರ ವರ್ಷದಲ್ಲಿ ಕಂಪನಿಯು ದೊಡ್ಡ ಮಟ್ಟದಲ್ಲಿ ನೇಮಕಾತಿ ಮಾಡು ಪ್ಲಾನ್ನಲ್ಲಿದೆ. Q3 ಹಣಕಾಸು ಯೋಜನೆ ರೂಪಿಸಲಾಗಿದೆ ಎಂದು ಕಾರ್ಯನಿರ್ವಾಹಕರೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ದೇಶದ 2ನೇ ಅತಿದೊಡ್ಡ ಸಾಫ್ಟ್ವೇರ್ ಸೇವೆಗಳ ರಫ್ತುದಾರ ಆಗಿರುವ ಇನ್ಫೋಸಿಸ್, ಪಾಶ್ಚಿಮಾತ್ಯ ರಾಷ್ಟ್ರಗಳ ಮಾರುಕಟ್ಟೆಯಿಂದ ತನ್ನ ಆದಾಯದ 80 ಪ್ರತಿಶತಕ್ಕಿಂತ ಹೆಚ್ಚು ಹಣ ಗಳಿಸುತ್ತದೆ. ಮುಂದಿನ ದಿನಗಳಲ್ಲಿ ಕಂಪನಿಯನ್ನು ಇನ್ನಷ್ಟು ಬಲಯುತವಾಗಿ ಮಾಡಲು ಹೊಸಬರ ಅವಶ್ಯಕತೆ ಇದೆ. ದೊಡ್ಡ ಮಟ್ಟದ ಗೆಲುವು ಸಾಧಿಸಬೇಕಾದರೆ ಕಂಪನಿಗೆ ಉದ್ಯೋಗಿಗಳು ಪ್ರಮುಖ ಪಾತ್ರ ವಹಿಸುತ್ತಾರೆ.
116 ಎಸೆತಗಳಲ್ಲಿ 244 ರನ್: ಛೇ ಇದೆಂಥಾ ತಪ್ಪು ಮಾಡೀತು RCB; ಮಾಜಿ ಆಟಗಾರನೇ ಈಗ ವಿಲನ್!
ಇಂಜಿನಿಯರಿಂಗ್ ಪದವೀಧರರು ಈ ಹಿಂದಿನ ಕೆಲ ವರ್ಷಗಳಲ್ಲಿ ಉದ್ಯೋಗವನ್ನು ಕಳೆದುಕೊಂಡಿದ್ದರು. ಆದರೆ ಈಗ ಎಲ್ಲ ಕಂಪನಿಗಳು ನಿಧಾನ ಗತಿಯಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಅದರಂತೆ ಇನ್ಫೋಸಿಸ್ ಕೂಡ 20 ಸಾವಿರಕ್ಕೂ ಅಧಿಕ ಹೊಸ ಉದ್ಯೋಗಿಗಳನ್ನು ಕಂಪನಿಗೆ ಸೇರ್ಪಡೆ ಮಾಡಿಕೊಳ್ಳಲು ಪ್ಲಾನ್ ಮಾಡಿದೆ.