ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ 2025-26ನೇ ಸಾಲಿನ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ವೇಳೆ ಬೀದಿಬದಿ ವ್ಯಾಪರಿಗಳಿಗೆ ಯುಪಿಐ ಲಿಂಕ್ ಆಗಿರುವ ಕ್ರೆಡಿಟ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಈ ಯಶಸ್ಸಿನ ಆಧಾರದ ಮೇಲೆ 30,000 ರೂಪಾಯಿಗಳ ಮಿತಿ ಮತ್ತು ಸಾಮರ್ಥ್ಯ ವೃದ್ಧಿ ಬೆಂಬಲದೊಂದಿಗೆ UPI-ಸಂಯೋಜಿತ ಕ್ರೆಡಿಟ್ ಕಾರ್ಡ್ಗಳಿಂದ ಬ್ಯಾಂಕ್ಗಳಿಂದ ವರ್ಧಿತ ಸಾಲಗಳೊಂದಿಗೆ ಯೋಜನೆಯನ್ನು ನವೀಕರಿಸಲಾಗುತ್ತದೆ” ಎಂದು ನರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಯಲ್ಲಿ ತಿಳಿಸಿದ್ದಾರೆ.
PM ಬೀದಿ ವ್ಯಾಪಾರಿಗಳ ಸ್ವನಿಧಿ, ಬೀದಿ ವ್ಯಾಪಾರಿಗಳಿಗೆ ಕೈಗೆಟುಕುವ ಸಾಲಗಳನ್ನು ಒದಗಿಸುವ ವಿಶೇಷ ಮೈಕ್ರೋ-ಕ್ರೆಡಿಟ್ ಸೌಲಭ್ಯವಾಗಿದೆ.
‘ಭಾರತದಲ್ಲಿ ಸುಮಾರು 7.5 ಕೋಟಿ ಮಂದಿಗೆ ಮಧ್ಯಮ ವರ್ಗದ ಕೈಗಾರಿಗಳು ಉದ್ಯೋಗ ನೀಡಿವೆ. ಇವರಿಗೆ ನೆರವಾಗಲು ಸಣ್ಣ ಹಾಗೂ ಅತೀ ಸೂಕ್ಷ್ಮಿ ಉದ್ಯಮಗಳಿಗೆ ಸಾಲ ನೀಡಲು ಅವಕಾಶ ನೀಡಲಾಗುತ್ತದೆ. 5 ಕೋಟಿ ರೂ.ನಿಂದ 10 ಕೋಟಿ ರೂ.ವರೆಗೆ ಉದ್ಯಮ ಆರಂಭಿಸಲು ಸಾಲ ನೀಡಲಾಗುತ್ತದೆ.
ಅಲ್ಲದೇ ಅವಧಿ ಸಾಲ ಸುಮಾರು 20 ಕೋಟಿ ರೂ. ನೀಡಲು ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೇ ಮೊದಲ ಬಾರಿಗೆ ಉದ್ಯಮ ಆರಂಭಿಸುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೆ 2 ಕೋಟಿ ರೂ. ಸಾಲ ನೀಡುವುದಾಗಿ ನಿರ್ಮಲಾ ಸೀತರಾಮನ್ ಘೋಷಿಸಿದರು.