ಆರ್ಸಿಬಿ ನೂತನ ಕ್ಯಾಪ್ಟನ್ ಆಗಿ ಯುವ ಆಟಗಾರ ಫಿಕ್ಸ್ ಆಗಿದ್ದು, ಯಾರು ಊಹೆ ಮಾಡದ ಪ್ಲೇಯರ್ ಈಗ ಕ್ಯಾಪ್ಟನ್ ಆಗಿದ್ದಾರೆ.
ಸಣ್ಣ ಆಗ್ಬೇಕು ಅನ್ಕೊಂಡಿದ್ದೀರಾ!? ಹಾಗಿದ್ರೆ ಈ ಸಮಯದಲ್ಲಿ ವಾಕ್ ಮಾಡೋದು ಬೆಸ್ಟ್!
ಐಪಿಎಲ್ನಲ್ಲಿ ಅತಿ ಹೆಚ್ಚು ಕ್ರೇಜ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ತನ್ನ ಹೊಸ ನಾಯಕನನ್ನು ಫೈನಲ್ ಮಾಡುವ ಕಾರ್ಯದಲ್ಲಿದೆ. ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಫಾಫ್ ಡುಪ್ಲೆಸಿಸ್ ಅವರನ್ನು ಮುಂದಿನ ಸೀಸನ್ಗೆ ಉಳಿಸಿಕೊಳ್ಳಲು ಆರ್ಸಿಬಿ ಮ್ಯಾನೇಜ್ಮೆಂಟ್ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಇದರೊಂದಿಗೆ ಹೊಸ ನಾಯಕನನ್ನು ಹರಾಜಿನಲ್ಲಿ ಖರೀದಿ ಮಾಡದೆ, ಈಗಾಗಲೇ ತಂಡದಲ್ಲಿರುವ ಆಟಗಾರನನ್ನೇ ಕ್ಯಾಪ್ಟನ್ ಮಾಡಲು ನಿರ್ಧರಿಸಿದೆಯಂತೆ.
ಹರಾಜಿಗೂ ಮುನ್ನ ಸಲ್ಲಿಕೆ ಮಾಡುವ ರಿಟೈನ್ ಲಿಸ್ಟ್ನಲ್ಲಿ ಇರುವ ಪ್ಲೇಯರ್ಅನ್ನು ಕ್ಯಾಪ್ಟನ್ ಮಾಡಲು ಫ್ರಾಂಚೈಸಿ ಮುಂದಾಗಿದೆಯಂತೆ. ಇದರಂತೆ ಮೆಗಾ ಹರಾಜಿನ ಮೊದಲು ಆರ್ಸಿಬಿ ವಿರಾಟ್ ಕೊಹ್ಲಿ, ವಿಲ್ ಜಾಕ್ಸ್ ಮತ್ತು ರಜತ್ ಪಾಟಿದಾರ್ ಅವರನ್ನು ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ.
ಯುವ ಆಟಗಾರನ ನಾಯಕತ್ವದ ಕೌಶಲ್ಯವನ್ನು ನಂಬಿ ಮುಂದಿನ ಋತುವಿನಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗುವುದು ಎನ್ನಲಾಗಿದೆ. ಇದೇ ನಡೆದರೆ ಪಾಟಿದಾರ್ಗೆ ಹೆಗಲಿಗೆ ದೊಡ್ಡ ಜವಾಬ್ದಾರಿ ಸಿಗಲಿದೆ. ವಿರಾಟ್ ಕೊಹ್ಲಿ ಜೊತೆಗೆ ಹರಾಜಿನಲ್ಲಿ ತಂಡಕ್ಕೆ ಬರುವ ಸ್ಟಾರ್ ಆಟಗಾರರನ್ನು ಮ್ಯಾನೇಜ್ ಮಾಡುವುದು ಅಷ್ಟು ಸುಲಭದ ಮಾತಲ್ಲ, ಆದರೆ ವಿರಾಟ್ ಕೊಹ್ಲಿ ಕಳೆದ ಮೂರು ಋತುಗಳಿಂದ ನಾಯಕತ್ವದಿಂದ ದೂರ ಉಳಿದಿದ್ದಾರೆ.
ಕೊಹ್ಲಿ ಕ್ಯಾಪ್ಟನ್ ಪಟ್ಟದಿಂದ ಕೆಳಕ್ಕಿಳಿದ ಬಳಿಕ ಡು ಪ್ಲೆಸಿಸ್ ಅವರು ತಂಡದ ನಾಯಕನ ಜವಾಬ್ದಾರಿಯನ್ನು ವಹಿಸಿಕೊಡಿದ್ದರು. ಕ್ಯಾಪ್ಟನ್ ಪಟ್ಟದಿಂದ ಕೆಳಕ್ಕೆ ಇಳಿದರೂ ಕೊಹ್ಲಿ ಡು ಪ್ಲೆಸಿಸ್ ಗೆ ಸಲಹೆ ನೀಡುತ್ತಾ ಬಂದಿದ್ದರು.ಈಗ ಪಾಟಿದಾರ್ ಕ್ಯಾಪ್ಟನ್ ಆದರೆ ಕೊಹ್ಲಿ ಶಾಡೋ ಕ್ಯಾಪ್ಟನ್ಸಿ ಇರಲಿದೆ ಎನ್ನಲಾಗಿದೆ. ಏಕೆಂದರೆ ಈ ಹಿಂದೆ ಪಾಟಿದಾರ್ ಐಪಿಎಲ್ನಲ್ಲಿ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ ಅನುಭವವಿಲ್ಲ. ಅಲ್ಲದೇ ಕೊಹ್ಲಿ ಸಲಹೆಗಳು ಪಾಟಿದಾರ್ ಗೆ ಪ್ಲಾಸ್ ಆಗುವ ಅವಕಾಶವಿದೆ.
ಮತ್ತೊಂದೆಡೆ ನಾಯಕತ್ವದ ಜವಾಬ್ದಾರಿಯನ್ನು ಮತ್ತೊಮ್ಮೆ ವಿರಾಟ್ ಕೊಹ್ಲಿಗೆ ಹಸ್ತಾಂತರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಕೊಹ್ಲಿ ಯಾವಾಗಲೂ ಆರ್ಸಿಬಿ ಪರ ಬ್ಯಾಟಿಂಗ್ ಮಾಡಲು ಬಯಸುತ್ತಿದ್ದರು. ಆದರೆ, ಆಟಗಾರನಾಗಿ ಮತ್ತು ನಾಯಕನಾಗಿಯೂ ಅದು ಈಡೇರಲಿಲ್ಲ. ಕೊನೆಯ ಬಾರಿಗೆ ಅವರೇ ನಾಯಕನಾಗಿದ್ದು ಕಪ್ ಗಾಗಿ ಪ್ರಯತ್ನಿಸಿದರೆ ಉತ್ತಮ ಎಂದು ಆರ್ ಸಿಬಿ ಮ್ಯಾನೇಜ್ ಮೆಂಟ್ ಭಾವಿಸಿದೆ ಎಂದು ವರದಿಯಾಗಿದೆ.
2025ರಲ್ಲಿ ಮತ್ತೊಮ್ಮೆ ನಾಯಕತ್ವ ವಹಿಸಿಕೊಳ್ಳುವಂತೆ ಕೊಹ್ಲಿ ಮನವೊಲಿಕೆ ಮಾಡಲು ಐಪಿಎಲ್ ಫ್ರಾಂಚೈಸಿ ಮುಂದಾಗಿದೆಯಂತೆ. ಕೊಹ್ಲಿ ಒಪ್ಪಿದರೂ ಒಪ್ಪದಿದ್ದರೂ ರಜತ್ ಪಾಟಿದಾರ್ ಎರಡನೇ ಆಯ್ಕೆಯಾಗಿ ಉಳಿಯುತ್ತಾರೆ. ಹಾಗಾಗಿ ಐಪಿಎಲ್ 2025ರಲ್ಲಿ ಪಾಟಿದಾರ್ ಅಥವಾ ಕೊಹ್ಲಿ ಆರ್ಸಿಬಿಯನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ