ಸ್ಯಾಂಡಲ್ವುಡ್ ನಟಿ ರಾಧಿಕಾ ಕುಮಾರಸ್ವಾಮಿ (Radhika Kumarswamy) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನವೆಂಬರ್ 11 (ಇಂದು) ತಮ್ಮ ಹುಟ್ಟುಹಬ್ಬವನ್ನು (Birthday) ಫ್ಯಾನ್ಸ್ ಜೊತೆ ನಟಿ ಆಚರಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬರ್ತ್ಡೇ ಆಚರಣೆಯಿಂದ ದೂರವಿದ್ದರು. ಈ ಬಾರಿ ಫ್ಯಾನ್ಸ್ಗೆ ಭೇಟಿಯಾಗಲು ಸಮಯ ಮೀಸಲಿಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ನಟಿ ಫ್ಯಾನ್ಸ್ಗೆ ಆಹ್ವಾನ ನೀಡಿದ್ದಾರೆ. ನಮಸ್ಕಾರ, ಹಲವು ವರ್ಷಗಳಿಂದ ಅಭಿಮಾನಿಗಳನ್ನ ಭೇಟಿ ಮಾಡೋಕೆ ಆಗಿರಲಿಲ್ಲ. ನ.11ರಂದು ಶನಿವಾರ ನನ್ನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ. ಅಂದು ನಿಮಗೆ ಸಿಗುತ್ತೇನೆ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.
![Demo](https://ainlivenews.com/wp-content/uploads/2023/12/spoorthi-1.jpg)
ಇದರ ಜೊತೆಗೆ ಭೇಟಿಯಾಗೋಕೆ ವಿಳಾಸ ಕೂಡ ನೀಡಿದ್ದಾರೆ. ವಿಳಾಸ ಈ ಕೆಳಗಿನಂತಿದೆ. 10/11 ಎರಡನೇ ಮುಖ್ಯ ರಸ್ತೆ, ಎರಡನೇ ಕ್ರಾಸ್ ಆರ್ಎಂವಿ ಎರಡನೇ ಸ್ಟೇಜ್, ಮೂರನೇ ಬ್ಲಾಕ್ ನ್ಯೂ ಬೆಲ್ ರೋಡ್, ಡಾಲರ್ಸ್ ಕಾಲೋನಿ ಬೆಂಗಳೂರು ಎಂದು ಮಾಹಿತಿ ನೀಡಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)