ಬೆಂಗಳೂರು: ಇನ್ನೂ ಯಾಕೆ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ಯಜಮಾನಿಯರು ಗೊಳೋ ಅನ್ನುತ್ತಿದ್ರು ಅವರಿಗೆಲ್ಲಾ ಈಗ ಸಂತಸದ ಸುದ್ದಿ ಸಿಕ್ಕಿದೆ ಏನಾಪ್ಪಾ ಅಂದ್ರೆ ಇದೀಗ ಕೊನೆಗೂ ಜೂನ್ ತಿಂಗಳ ಹಣ ಮಹಿಳೆಯರ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಐದು ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣ ಮನೆ ಯಜಮಾನಿಯರ ಬ್ಯಾಂಕ್ ಖಾತೆಗೆ ಸಂದಾಯವಾಗಿದೆ. ಆದಾಗ್ಯೂ, ಮಹಿಳೆಯರ ಗೋಳು ತಪ್ಪಿಲ್ಲ. ಯಾಕೆಂದರೆ ಇನ್ನೆರಡು ತಿಂಗಳ ಬಾಕಿ ಹಣ ಜಮೆಯಾಗಬೇಕಿರೋದ್ರಿಂದ ಹೆಣ್ಣು ಮಕ್ಕಳು ಗೊಳೋ ಅನ್ನುತ್ತಿದ್ದಾರೆ.
ಮೂರು ತಿಂಗಳ ಬಳಿಕ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆ ಸೇರಿದೆ. ಆದರೆ, ಬಾಕಿ ಇರುವ ಇನ್ನೆರಡು ತಿಂಗಳ ಹಣ ಖಾತೆ ಸೇರುವುದು ವಿಳಂಬವಾಗಲಿದೆ. ಸದ್ಯ ಜುಲೈ, ಆಗಸ್ಟ್ ತಿಂಗಳ ಹಣ ಖಾತೆಗಳಿಗೆ ವರ್ಗಾವಣೆಯಾಗುವುದು ಬಾಕಿ ಉಳಿದಿದೆ.
ಜೂನ್ ತಿಂಗಳಲ್ಲಿ ಎಸ್ಸಿ, ಎಸ್ಟಿ ಫಾಲಾನುಭವಿಗಳ ಪೋರ್ಟಲ್ನಲ್ಲಿ ಒಂದಷ್ಟು ಸಮಸ್ಯೆಗಳು ಕಂಡುಬಂದಿದ್ದವು. ಅವುಗಳನ್ನು ಸರಿಪಡಿಸಿ ಈಗ ಖಾತೆಗೆ ಹಣಹಾಕಲಾಗುತ್ತಿದೆ. ಈ ಮಧ್ಯೆ, ಜೂನ್ ತಿಂಗಳ ಹಣದ ಜತೆಗೇ ಜುಲೈ ಹಣ ಕೂಡ ಬರಲಿದೆ ಎಂದು ಕಾಯುತ್ತಿದ್ದ ಫಾಲಾನುಭವಿಗಳಿಗೆ ನಿರಾಸೆಯಾಗಿದೆ.