ಬೆಂಗಳೂರು:- ಬಿಎಂಆರ್ಸಿಎಲ್ ನಮ್ಮ ಮೆಟ್ರೋ ನಿಲ್ದಾಣದಲ್ಲಿಯೇ ಕ್ಯೂಆರ್ ಟಿಕೆಟ್ ಮಿಷನ್ ಅಳವಡಿಕೆ ಮಾಡಿದೆ.
ಪಶ್ಚಿಮ ಬಂಗಾಳದ ರಾಜಭವನ ಸ್ಫೋಟಿಸುವುದಾಗಿ ಬೆದರಿಕೆ ಕರೆ..!
ಟ್ರಾಫಿಕ್ ಸಾಗರದಿಂದ ಬಳಲಿರುವ ರಾಜಧಾನಿ ಜನರು ಮೆಟ್ರೋ ಮೊರೆ ಹೋಗಿದ್ದಾರೆ. ದಿನದಿಂದ ದಿನಕ್ಕೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರ ನಡುವೆ ಟೋಕನ್ ಟಿಕೆಟ್ ಕಿರಿಕಿರಿ ತಪ್ಪಿಸಲು ಪರಿಚಯಿಸಿದ ಕ್ಯೂಆರ್ ಕೋಡ್ ಅನ್ನು ತಿಂಗಳಿಗೆ 25 ಲಕ್ಷ ಜನ ಬಳಕೆ ಮಾಡುತ್ತಾರೆ. ಈಗ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲು ನಮ್ಮ ಮೆಟ್ರೋ ನಿಲ್ದಾಣದಲ್ಲೇ ಒಂದೇ ನಿಮಿಷದೊಳಗೆ ಕ್ಯೂಆರ್ ಕೋಡ್ ಖರೀದಿಗೆ ವ್ಯವಸ್ಥೆ ಮಾಡಿದೆ.
ಬಿಎಂಆರ್ಸಿಎಲ್ ನವೆಂಬರ್ 2022ರಲ್ಲಿ ಕ್ಯೂಆರ್ ಕೋಡ್ ಟಿಕೆಟ್ ಆರಂಭ ಮಾಡಿತ್ತು. ಈಗ ತಿಂಗಳಿನಲ್ಲಿ 25 ಲಕ್ಷ ಜನರು ಆನ್ಲೈನ್ ಮೂಲಕ ಕ್ಯೂಆರ್ ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಇದರಿಂದ ಟಿಕೆಟ್ ಕೌಂಟರ್ ಸಿಬ್ಬಂದಿಯ ಒತ್ತಡ ಕಮ್ಮಿಯಾಗಿದೆ. ಮೊಬೈಲ್ನಲ್ಲಿ ನೆಟ್ವರ್ಕ್ ಸರಿಯಿಲ್ಲದಾಗ ಪ್ರಯಾಣಿಕರು ಕ್ಯೂಆರ್ ಟಿಕೆಟ್ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ವೇಳೆ ಈ ಕ್ಯೂಆರ್ ಟಿಕೆಟ್ ಮಿಷನ್ ಸಹಾಯಕವಾಗಲಿದೆ. ಜೊತೆಗೆ ಟೋಕನ್ಗಾಗಿ ಕ್ಯೂನಲ್ಲಿ ನಿಲ್ಲುವ ಸಮಸ್ಯೆ ಕೂಡ ತಪ್ಪುತ್ತೆ ಎಂದು ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿ ಯಶವಂತ್ ಚೌವ್ಹಾಣ್ ಹೇಳಿದರು
ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ 8 ಕಡೆಗಳಲ್ಲಿ ಹಾಗೂ ಎಂಜಿ ರಸ್ತೆಯಲ್ಲಿ 6 ಕಡೆಗಳಲ್ಲಿ ಮಿಷನ್ಗಳ ಮೂಲಕ ಕ್ಯೂಆರ್ ಟಿಕೆಟ್ ಖರೀದಿ ವ್ಯವಸ್ಥೆ ಮಾಡಲಾಗಿದೆ. ಟೋಕನ್ ಖರೀದಿ ಮಾಡಲು ಕೌಂಟರ್ಗಳಲ್ಲಿ ಸರತಿ ಸಾಲಿನಲ್ಲಿ ಪ್ರಯಾಣಿಕರು ನಿಲ್ಲುವ ಸಮಯವನ್ನು ಕಡಿಮೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಕೇವಲ ಒಂದು ವಾರದ ಹಿಂದೆ ಅಳವಡಿಕೆ ಮಾಡಿರುವ ಟಿಕೆಟ್ ಜನರೇಟ್ ಮಷಿನ್ಗಳಿಗೆ ಜನರಿಂದಲೂ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಐಪಿಎಲ್ ಪಂದ್ಯದ ಸಮಯದಲ್ಲಿ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಇದರ ಪ್ರಯೋಜನವಾಗಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಇತರ ಮೆಟ್ರೋ ನಿಲ್ದಾಣಗಳಿಗೂ ವಿಸ್ತರಣೆ ಮಾಡುವ ಪ್ಲಾನ್ನಲ್ಲಿ ಬಿಎಂಆರ್ಸಿಎಲ್ ಇದೆ.