ಬೆಂಗಳೂರು:- ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ನಿಲ್ದಾಣಗಳಲ್ಲಿ ಡಿಜಿಟಲ್ ಲಾಕರ್ ಸೌಲಭ್ಯ ಒದಗಿಸಲಾಗಿದೆ.
ರೀಲ್ಸ್ಗಾಗಿ ಪೆಟ್ರೋಲ್ ಬಾಂಬ್ ಸ್ಪೋಟಿಸಿ ಹುಚ್ಚಾಟ ಮೆರೆದ ಸ್ಟೂಡೆಂಟ್ಸ್ ವಿರುದ್ಧ ಕೇಸ್!
ಮೆಟ್ರೋ ಪ್ರಯಾಣಿಕರು ಸೇಫ್ ಕ್ಲಾಕ್ ಸಂಸ್ಥೆಯ ಸ್ಮಾರ್ಟ್ ಡಿಜಿಟಲ್ ಲಾಕರ್ನಲ್ಲಿ ತಮ್ಮ ಲಗೇಜ್ ಇಟ್ಟು ಬೇರಡೆ ಹೋಗಬೇಕಿದ್ದ ಸ್ಥಳಕ್ಕೆ ತೆರಳಿ ವಾಪಸ್ ಬರಬಹುದು.
ನಾಡಪ್ರಭು ಕೆಂಪೇಗೌಡ ನಿಲ್ದಾಣ ನಲ್ಲಿ ಬುಧವಾರ ಸ್ಮಾರ್ಟ್ ಡಿಜಿಟಲ್ ಲಾಕರ್ ಆರಂಭಗೊಂಡಿದೆ. ಮೆಜೆಸ್ಟಿಕ್ ನಿಲ್ದಾಣದ ‘ಡಿ’ ನಿರ್ಗಮನದಲ್ಲಿ ಸ್ಥಾಪಿಸಲಾಗಿರುವ ಸ್ಮಾರ್ಟ್ ಡಿಜಿಟಲ್ ಲಾಕರ್ಗೆ ಬಿಎಂಆರ್ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕಿ ಕಲ್ಪನಾ ಕೊಟಾರಿಯಾ ಚಾಲನೆ ನೀಡಿದರು. ಪ್ರಯಾಣಿಕರು 2 ರಿಂದ 5 ಬ್ಯಾಗ್ಗಳನ್ನು ಸ್ಮಾರ್ಟ್ ಡಿಜಿಟಲ್ ಲಾಕರ್ನಲ್ಲಿ ಇಡಬಹುದಾಗಿದೆ.
ಸ್ಮಾರ್ಟ್ ಡಿಜಿಟಲ್ ಲಾಕರ್ನಲ್ಲಿನ ಕಿಯೋಸ್ಟ್ನಲ್ಲಿನ ಆಯ್ಕೆಗಳನ್ನು ಭರ್ತಿ ಮಾಡಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ, ಒಟಿಪಿ ಬರಲಿದೆ. ಅದನ್ನು ಕಿಯೋಸ್ಟ್ನಲ್ಲಿ ಹಾಕಿದರೆ ಬ್ಯಾಗ್ಗಳನ್ನು ಇಡಲು ಲಾಕರ್ ದೊರೆಯಲಿದೆ. ನಂತರ, ಲಾಕರ್ನಲ್ಲಿ ಬ್ಯಾಗ್ ಇಟ್ಟು ಲಾಕ್ ಮಾಡಬೇಕು. ಅನಂತರ ತೆರೆಯಬೇಕಿದ್ದರೆ ಬ್ಯಾಗ್ ಮಾಲೀಕರೇ ಬಂದು ಒಟಿಪಿ ಹಾಕಬೇಕು. ಆಗ ಲಾಕರ್ ತೆರೆಯುತ್ತದೆ. ಹೀಗಾಗಿ, ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ.
2 ರಿಂದ 3 ಬ್ಯಾಗ್ಗಳನ್ನು 6 ಗಂಟೆಗಳ ಕಾಲ ಇಡಲು 70 ರೂ. ಹಾಗೂ 4 ರಿಂದ 5 ಬ್ಯಾಗ್ಗಳನ್ನು ಇಡಲು 100 ರೂ. ಶುಲ್ಕ ವಿಧಿಸಲಾಗುತ್ತದೆ. ಅದೇ 12 ಗಂಟೆಗಳ ಕಾಲ ಬ್ಯಾಗ್ಗಳನ್ನು ಇಟ್ಟರೆ ಕ್ರಮವಾಗಿ 120 ಮತ್ತು 160 ರೂ. ಶುಲ್ಕ ನಿಗದಿ ಮಾಡಲಾಗಿದೆ.