ಸಾಮಾನ್ಯವಾಗಿ ಹಬ್ಬಗಳ ದಿನದಂದು ಹೆಚ್ಚೆಚ್ಚು ಸಿನಿಮಾಗಳು (Movie) ಬಿಡುಗಡೆ (Release) ಆಗುವುದು ವಾಡಿಕೆ. ಆದರೆ, ಹಬ್ಬ ಮುಗಿದ ನಂತರವೂ ಅಚ್ಚರಿ ಎನ್ನುವಂತೆ ಇಂದು 31 ಚಿತ್ರಗಳು ರಿಲೀಸ್ ಆಗುತ್ತಿವೆ. ಈ ನಡೆಯನ್ನು ಸಂಭ್ರಮಿಸಬೇಕೋ ಅಥವಾ ಆತಂಕ ಪಡಬೇಕು ಗೊತ್ತಿಲ್ಲ ಎನ್ನುತ್ತಾರೆ ಸಿನಿ ಪ್ರೇಮಿಗಳು.
ರಿಲೀಸ್ ಆಗುತ್ತಿರುವ 31 ಚಿತ್ರಗಳೂ ಕನ್ನಡದಲ್ಲ. ತಮಿಳು, ತೆಲುಗು (Telugu), ಮಲಯಾಳಂ, ಕನ್ನಡ (Kannada), ಹಿಂದಿ ಹೀಗೆ ವಿವಿಧ ಭಾಷೆಯ ಸಿನಿಮಾಗಳು ಆವಾಗಿವೆ. ಇವುಗಳಲ್ಲಿ ಕನ್ನಡದ್ದೇ ಎಂಟು ಚಿತ್ರಗಳಿವೆ. ರಕ್ಷಿತ್ ಶೆಟ್ಟಿ ನಟನೆಯ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಕೂಡ ಸೇರಿಕೊಂಡಿದ್ದೆ.
ತೆಲುಗಿನ 9 ಚಿತ್ರಗಳು, ತಮಿಳಿನ 4 (Tamil) ಹಾಗೂ ಮಲಯಾಳಂನ 9 (Malayalam) ಚಿತ್ರಗಳು ನಾಳೆ ತೆರೆಗೆ ಅಪ್ಪಳಿಸುತ್ತಿವೆ. ಈ ಪ್ರಮಾಣದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಯಾರಿಗೆ ಚಿತ್ರಮಂದಿರ ಸಿಗುತ್ತೋ, ಯಾರಿಗೆ ಸಿಗುವುದಿಲ್ಲವೋ ಕಾದು ನೋಡಬೇಕು. ಒಟ್ಟಿನಲ್ಲಿ ಸಿನಿ ಪ್ರಿಯರಿಗೆ ಇಂದು ಸಿನಿಮೋತ್ಸವ ನಡೆಯೋದು ಗ್ಯಾರಂಟಿ.