ಬೆಂಗಳೂರು:- ಟ್ರಾಫಿಕ್ನಿಂದ ಬಳಲುತ್ತಿದ್ದವರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಸಿದ್ಧವಾಗಿದೆ.
ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೂನ್ 21 ರ ಬಳಿಕ ಚುರುಕುಗೊಳ್ಳತ್ತೆ ಮುಂಗಾರು..!
ರಾಗಿಗುಡ್ಡ-ಸೆಂಟ್ರಲ್ ಸಿಲ್ಕ್ ಬೋರ್ಡ್ ವರಗೆ ನಿರ್ಮಾಣವಾಗ್ತಿದ್ದ 3.3 ಕಿಮೀ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ಕಾಮಗಾರಿ ಕಂಪ್ಲಿಟ್ ಆಗಿದ್ದು, ಶೀಘ್ರದಲ್ಲಿಯೇ ಉದ್ಘಾಟನೆಗೆ ಸಜ್ಜಾಗ್ತಿದೆ.
ಅಂತಿಮ ತಪಾಸಣೆ ಬಾಕಿಯಿದ್ದು ಅದು ಮುಗಿಯುತ್ತಿದ್ದಂತೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಈ ಡಬಲ್ ಡೆಕ್ಕರ್ ಫ್ಲೈಓವರ್ನಲ್ಲಿ ಮೆಟ್ರೋ ರೈಲು ಹಾಗೂ ವಾಹನ ಸಂಚರಿಸುತ್ತೆ. ಕೆಳರಸ್ತೆಯಿಂದ ಡಬ್ಬಲ್ ಡೆಕ್ಕರ್ನ ಮೊದಲ ಫ್ಲೈಓವರ್ 8 ಮೀ. ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್ 16 ಮೀ. ಎತ್ತರದಲ್ಲಿದೆ. ಸಂಚಾರ ದಟ್ಟಣೆ ನಿವಾರಣೆ ದೃಷ್ಟಿಯಿಂದ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗೆ ಸಿಗ್ನಲ್ ಮುಕ್ತವಾಗಿಸಲಾಗಿದೆ. ಎಚ್ಎಸ್ಆರ್ ಲೇಔಟ್ ಹಾಗೂ ಹೊಸೂರು ಲೇಔಟನ್ನು ಇದರಿಂದ ಅಡ್ಡಿಯಿಲ್ಲದೆ ತಲುಪಬಹುದು.
ಇದರ ಜೊತೆಗೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಸಂಪೂರ್ಣ ಸಿಗ್ನಲ್ ಮುಕ್ತಗೊಳಿಸುವ ಬಿಎಂಆರ್ಸಿಎಲ್ನಿಂದ ಬರೋಬ್ಬರಿ ಐದು ರ್ಯಾಂಪ್ಗಳ ನಿರ್ಮಾಣ ಮಾಡ್ತಿದೆ. ಒಂದು ರ್ಯಾಂಪ್ ರಾಗಿಗುಡ್ಡದಿಂದ ಡಬಲ್ ಡೆಕ್ಕರ್ ಫ್ಲೈ ಒವರ್ ಮೇಲೆ ಬರುವ ವಾಹನ ಸವಾರಿಗೆ ಸಿಲ್ಕ್ ಬೊರ್ಡ್ ನಲ್ಲಿ ಸಿಗ್ನಲ್ನಲ್ಲಿ ನಿಲ್ಲದೆ ಎಚ್ಎಸ್ಆರ್ ಲೇಔಟ್ ಮತ್ತು ಹೊಸೂರು ರಸ್ತೆಗೆ ತಲುಪಲು ಸಹಕಾರಿಯಾಗುತ್ತದೆ. ಮತ್ತೊಂದು ರ್ಯಾಂಪ್ ಬಿಟಿಎಂ ಲೇಔಟ್ನಿಂದ ಬರುವವರು ಔಟರ್ ರಿಂಗ್ ರೋಡ್ ಮತ್ತು ಹೊಸೂರು ರಸ್ತೆ ಪ್ರವೇಶಿಸಲು ಬಳಸಬಹುದು. ಇನ್ನೊಂದು ರ್ಯಾಂಪ್ ರಾಗಿಗುಡ್ಡದಿಂದ ಬರೋರು ಕೆ.ಆರ್. ಪುರಂ ಕಡೆಗೆ ಹೋಗಲು ನೆರವಾಗುತ್ತೆ. ಈ ಬಗ್ಗೆ ವಾಹನ ಸವಾರ ರಾಮಚಂದ್ರ ರಾವ್ ಸಂತಸ ವ್ಯಕ್ತಪಡಿಸಿದ್ದಾರೆ.