ಬೆಂಗಳೂರು:- BMRCL ಅಧಿಕಾರಿಗಳು ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಸುಮಾರು 19 ಕಿಲೋ ಮೀಟರ್ ಉದ್ದದ ಆರ್ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಚಾಲಕ ರಹಿತ ವಿದ್ಯುದ್ದೀಕರಣ ಮೆಟ್ರೋ ಸೇವೆಗೆ ಸಿದ್ಧವಾಗಿದೆ.
ಶೀಘ್ರವೇ ಹಳದಿ ಮಾರ್ಗವು ಈ ವರ್ಷದ ಅಂತ್ಯದ ವೇಳೆಗೆ ಶುರುವಾಗಲಿದೆ. ಪ್ರಾರಂಭಿಕವಾಗಿ 15 ನಿಮಿಷಗಳಿಗೆ ಒಂದರಂತೆ ಒಟ್ಟು ಎಂಟು ರೈಲುಗಳು ಸೇವೆಗೆ ಸಿದ್ಧವಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್
ತಿಳಿಸಿದೆ.
Bagalakote: ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಅದ್ದೂರಿಯಾಗಿ ಮೊಹರಂ ಆಚರಣೆ!
ಈ ಹಿಂದೆ ಪ್ರತಿ 20 ನಿಮಿಷಗಳ ಆವರ್ತನದೊಂದಿಗೆ ಆರರಿಂದ ಏಳು ರೈಲುಗಳನ್ನು ಬಿಟ್ಟು ಹಳದಿ ಮಾರ್ಗ ಸಂಚಾರ ಆರಂಭಿಸಲು ಬಿಎಂಆರ್ಸಿಎಲ್ ಸಿದ್ಧತೆ ನಡೆಸಿತ್ತು. ಆದರೆ ಇದೀಗ ಇದನ್ನು ಬದಲಾಯಿಸಲಾಗಿದೆ.
RV ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ 5,745 ಕೋಟಿ ರೂ. ವೆಚ್ಚದ ಈ ಮಾರ್ಗದಲ್ಲಿ ಪ್ರಮುಖ ಸಿವಿಲ್ ಮತ್ತು ಸಿಸ್ಟಮ್ಸ್ ಕಾಮಗಾರಿಗಳು ಪೂರ್ಣಗೊಂಡಿವೆ. 19.15 ಕಿ.ಮೀ ಮಾರ್ಗದಲ್ಲಿ ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ 16 ನಿಲ್ದಾಣಗಳಿವೆ.
ಜಯದೇವ ಆಸ್ಪತ್ರೆ, 39 ಮೀಟರ್ ಎತ್ತರದ ಭಾರತದ ಅತಿ ಎತ್ತರದ ಮೆಟ್ರೋ ನಿಲ್ದಾಣವು ಇಂಟರ್ ಚೇಂಜ್ ಸ್ಟೇಷನ್ ಆಗಲಿದೆ. ಅಂಡರ್ಪಾಸ್, ರಸ್ತೆ, ಫ್ಲೈಓವರ್, ಹಳದಿ ಲೈನ್ ಪ್ಲಾಟ್ಫಾರ್ಮ್, ಕಾನ್ಕೋರ್ಸ್ ಮತ್ತು ಪಿಂಕ್ ಲೈನ್ ಪ್ಲಾಟ್ಫಾರ್ಮ್ ಸೇರಿದಂತೆ ಈ ಜಂಕ್ಷನ್ ಆರು ಹಂತಗಳನ್ನು ಹೊಂದಿದೆ.
ಫೆಬ್ರವರಿಯಲ್ಲಿ ಚೀನಾದಿಂದ ಬಂದ ಆರು ಬೋಗಿಗಳನ್ನು ರೈಲಿನೊಂದಿಗೆ ಅಳವಡಿಸಿ ಜೂನ್ 13 ರಂದು ಹಳದಿ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಪ್ರಯೋಗವನ್ನು ಮಾಡಲಾಗಿತ್ತು.
ಆಸಿಲೇಷನ್ ಟ್ರಯಲ್ಸ್ ಮತ್ತು ಸೇಫ್ಟಿ ಕ್ಲಿಯರೆನ್ಸ್ ಸೇರಿದಂತೆ ಟ್ರಯಲ್ ರನ್ಗಳು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಡಿಸೆಂಬರ್ನಲ್ಲಿ ವಾಣಿಜ್ಯ ಕಾರ್ಯಾಚರಣೆಗಳು ಪ್ರಾರಂಭವಾಗಬಹುದು