ಬೆಂಗಳೂರು : ಆತಂಕದಲ್ಲಿದ್ದ ನಾನ್ ವೆಜ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.. ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಅಂತಕ್ಕಕ್ಕೆ ಕಾರಣವಾಗಿದ್ದ ರಾಜಸ್ಥಾನದಿಂದ ಬರುವ ಕುರಿ ಮಾಂಸ ತಿನ್ನೋಕೆ ಹಿಂದೇಟು ಹಾಕ್ತಿದ್ರು.. ಬೆಂಗಳೂರು ನಗರಕ್ಕೆ ರೈಲು ಗಳ ಮೂಲಕ ಬರುವ ಮಾಂಸದ ಬಗ್ಗೆ ಹಲವು ವದಂತಿಗೆ ಇಂದು ಅಧಿಕೃತ ಬ್ರೇಕ್ ಬಿದ್ದಿದೆ..
ಮೈತ್ರಿ ಪಾದಯಾತ್ರೆ ಬೆನ್ನಲ್ಲೇ ಬಿಜೆಪಿಯಲ್ಲಿ ಮತ್ತೊಂದು ಹೋರಾಟ: ವಿಜಯೇಂದ್ರ ಗೆ ಠಕ್ಕರ್ ಕೊಡಲು ಸಿದ್ಧತೆ!
ಹೌದು, ಕುರಿ ಮಾಂಸ ಎಂದು ವರದಿ ಬಂದ್ರೂ ಕೂಡ ಶುಚಿತ್ವ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿದ್ವು.. ಒಂದು ಕಡೆ ವರದಿ ಬಂದ್ರೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರ ನಡೆ ಮಾಂಸ ಪ್ರೀಯರಿಗೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.. ಆದ್ರೆ ಇದೀಗ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮಾಂಸ ಪ್ರಿಯರ ಆತಂಕ ದೂರ ಮಾಡಿದೆ.
ಮಾಂಸ ಶುಚಿತ್ವ ಮತ್ತು ಬ್ಯಾಕ್ಟೀರಿಯಾ ಬೆಳವಣಿಗೆ ಸಂಬಂಧ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ಗೆ ಕಳಿಸಲಾಗಿತ್ತು..ಲ್ಯಾಬ್ ರಿಪೋರ್ಟ್ ನಲ್ಲಿ ಮಾಂಸ ತಿನ್ನಲು ಸೇಫ್ ಅಂತ ದೃಢವಾಗಿದೆ..ರಾಜ್ಯದಲ್ಲಿ ರಾಜಸ್ಥಾನ ಮಾಂಸ ಮಾರಾಟಕ್ಕೆ ಯಾವದೇ ಅಡ್ಡಿ ಇಲ್ಲ..ಈಗಾಗಲೇ ರಾಜಸ್ಥಾನ ದಿಂದ ಬರುವ ಮಾಂಸ ಕುರಿ ಮಾಂಸ ಅಂತ ICAR ವರದಿ ಕಕೂಡ ಬಂದಿದೆ..ಇದೀಗ ಬಂದ ಮೂರು ಲ್ಯಾಬ್ ರಿಪೋರ್ಟ್ ನಿಂದ್ಲೂ ಮಾಂಸ ತಿನ್ನುಲು ಸೇಫ್ ಅಂತ ದೃಢಪಟ್ಟಿದ್ದು ಈ ಬಗ್ಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್ ಮಾಹಿತಿ ನೀಡಿದ್ದು,ಮಾಂಸ ಪ್ರಿಯರಿಗೆ ಸಂತಸ ತಂದಿದೆ….
ರಾಜಸ್ಥಾನದಿಂದ ತಂದಿದ್ದ ಮಾಂಸದ ಗುಣಮಟ್ಟ ವರದಿ ಬೆನ್ನಲ್ಲೇ ಅಬ್ದುಲ್ ರಜಾಕ್ ಪ್ರತಿಕ್ರಿಯೆ ನೀಡಿದ್ದು, ರಾಜಸ್ಥಾನದಿಂದ ತಂದಿದ್ದ ಮಾಂಸ ಸೇಫ್ ಎಂದು ವರದಿ ಬಂದಿದೆ..ನಾವು ನಾಯಿಯ ಹತ್ತಿರಕ್ಕೂ ಸುಳಿಯದವರು..ನಾಯಿ ಮಾಂಸ ತಂದಿದ್ದಾರೆ ಎಂದ್ರು, ನಂತರ ಕಳಪೆ ಮಾಂಸ ಎಂದರು..ಆರೋಪ ಮಾಡಿರೊರ್ಗೆ ಈಗ ಮುಖಭಂಗವಾಗಿದೆ..ಸುಳ್ಳು ಆರೋಪ ಮಾಡಿದವರ ಮೇಲೆ ಕ್ರಮವಾಗಬೇಕು..ಈ ಮೂಲಕ ಸರ್ಕಾರಕ್ಕೆ ಆಗ್ರಹ ಮಾಡ್ತೇನೆ..ಸರ್ಕಾರಕ್ಕೆ, ನಾಡಿಗೆ ಮಸಿ ಬಳಿಯುವ ಕೆಲಸ ಮಾಡಿದ್ರು.ಇಂತವರಿಗೆ ತಕ್ಕ ಶಿಕ್ಷೆಯಾಗಲೇಬೇಕು..ಅಬ್ದುಲ್ ರಜಾಕ್ಗೆ ಕೆಟ್ಟ ಹೆಸರನ್ನ ತರಬೇಕೆಂದು ಮಾಡಿದ್ದ ಷಡ್ಯಂತ್ರ ಇದು ರಾಜಸ್ಥಾನ್ ಮಾಂಸ ಉತ್ತಮ ಗುಣಮಟ್ಟದ್ದು, ನಾನು ಸಾಕಷ್ಟು ಬಾರಿ ಫ್ಲೈಟ್ ಮೂಲಕವೂ ಮಾಂಸವನ್ನ ತರಿಸ್ತಿದ್ದೇನೆ..ವ್ಯಾಪಾರದಲ್ಲಿ ಏನೂ ಬದಲಾವಣೆ ಆಗಿಲ್ಲ.ನಾಳೆ ಎಲ್ಲಾ ಇಲಾಖೆಗಳಿಗೆ ಮನವಿ ಕೊಡ್ತೇವೆ ಎಂದ್ರು.
ಒಟ್ನಲ್ಲಿ ರಾಜಸ್ಥಾನದಿಂದ ಬಂದ ಮಾಂಸ ಕುರಿ ಮಾಂಸ ಎಂದು ಸ್ಫಷ್ಟ ಪಡಿಸಿದ್ದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಇದೀಗ ಶಿಚಿತ್ವದ ವರದಿ ಬಂದಿದ್ದು ಮಾಂಸ ಪ್ರಿಯರಿಗಂತೂ ನಿಟ್ಟುಸಿರು ಬಿಡುವಂತಾಗಿದೆ..