ರಿಲಯನ್ಸ್ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ಗಳಲ್ಲಿ ಒಂದು. 48 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ. ಗ್ರಾಹಕರಿಗೆ ಅನುಗುಣವಾಗಿ ಅತ್ಯಾಕರ್ಷಕ ರೀಚಾರ್ಜ್ ಪ್ಲಾನ್ ಮತ್ತು ಕೊಡುಗೆಗಳನ್ನು ನೀಡುವ ಮೂಲಕ ಎಲ್ಲರ ಗಮನಸೆಳೆಯುತ್ತಿದೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಬೆಲೆ ಹೆಚ್ಚಿಸಿಕೊಳ್ಳದೇ ತನ್ನ ನೆಟ್ವರ್ಕ್ಗೆ ಬರೋ ಗ್ರಾಹಕರಿಗಾಗಿ ಹೊಸ ಆಫರ್ ಬಿಡುಗಡೆ ಮಾಡಿತು. ಈ ಕಾರಣದಿಂದ ಗ್ರಾಹಕರು ಬಿಎಸ್ಎನ್ಎಲ್ ನತ್ತ ಮುಖ ಮಾಡಲು ಆರಂಭಿಸಿದರು. ಇದೀಗ ರಿಲಯನ್ಸ್ ಜಿಯೋ ಕಡಿಮೆ ಬೆಲೆಯ 2 ಪ್ರಿಪೇಯ್ಡ್ ಪ್ಲಾನ್ಗಳನ್ನು ಬಿಡುಗಡೆಗೊಳಿಸಿದೆ.
Jio Rs 173 recharge plan
ಜಿಯೋದ ಒಂದು ತಿಂಗಳಿನ ಪ್ಲಾನ್ 173 ರೂ.ಗೆ ಲಭ್ಯವಿದೆ. ಇನ್ನುಳಿದ ಎರಡು ಖಾಸಗಿ ಕಂಪನಿಗಳು ಕನಿಷ್ಠ 180 ರಿಂದ 200 ರೂ.ವರೆಗೆ ತಿಂಗಳ ವ್ಯಾಲಿಡಿಟಿಯ ಪ್ಲಾನ್ ನೀಡುತ್ತಿವೆ. ರಿಲಯನ್ಸ್ ಜಿಯೋ ನೀಡುತ್ತಿರುವ 336 ದಿನಗಳ ವ್ಯಾಲಿಡಿಟಿಯ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ್ರೆ ನಿಮಗೆ ತಿಂಗಳಿಗೆ 173 ರೂಪಾಯಿ ಆಗುತ್ತದೆ. ಗ್ರಾಹಕರು 1,899 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ 336 ದಿನದ ಪ್ಲಾನ್ ಆಕ್ಟಿವೇಟ್ ಆಗುತ್ತದೆ.
336 ದಿನದ ವ್ಯಾಲಿಡಿಟಿ ಪ್ಲಾನ್ನಲ್ಲಿ ಗ್ರಾಹಕರಿಗೆ 24GB ಹೈಸ್ಪೀಡ್ ಡೇಟಾ ಯಾವುದೇ ದಿನದ ಮಿತಿ ಇಲ್ಲದೇ ಸಿಗಲಿದೆ. ಯಾವುದೇ ನೆಟ್ವರ್ಕ್ಗೆ ಅನಿಯಮಿತವಾಗಿ ಕಾಲ್ ಮಾಡಬಹುದು. ಹಾಗೆ 3,600 ಉಚಿತ ಎಸ್ಎಂಎಸ್ ಆಪ್ಷನ್ ಸಹ ಗ್ರಾಹಕರಿಗೆ ನೀಡಲಾಗುತ್ತದೆ.
Jio Rs 189 recharge plan
ಜಿಯೋದ ಮತ್ತೊಂದು ಪ್ರಿಪೇಯ್ಡ್ ಪ್ಲಾನ್ ಬೆಲೆ 189 ರೂಪಾಯಿ ಆಗಿದೆ. ಈ ಪ್ಲಾನ್ 2GB ಡೇಟಾ, ಅನ್ಲಿಮಿಟೆಡ್ ಕಾಲಿಂಗ್, ಉಚಿತ 300 ಎಸ್ಎಂಎಸ್ ಬೆನೆಫಿಟ್ ಒಳಗೊಂಡಿವೆ. ಇನ್ನುಳಿದಂತೆ ಗ್ರಾಹಕರಿಗೆ ಜಿಯೋ ಕ್ಲೌಡ್, ಜಿಯೋ ಟಿವಿ, ಜಿಯೋ ಸಿನಿಮಾ ಆಪ್ಗಳ ಆಕ್ಸೆಸ್ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ.
ಜಿಯೋ ಫೋನ್ ಬಳಕೆದಾರರಿಗೆ 23 ದಿನ ವ್ಯಾಲಿಡಿಟಿಯ 125 ರೂಪಾಯಿಯ ಪ್ಲಾನ್ ನೀಡಲಾಗಿದೆ. ಈ ಪ್ಲಾನ್ನಲ್ಲಿ ಪ್ರತಿದಿನ 0.5GB ಡೇಟಾ, ಅನ್ಲಿಮಿಟೆಡ್ ಕಾಲ್ ಮತ್ತು 300 ಉಚಿತ ಎಸ್ಎಂಎಸ್ ಸಿಗಲಿದೆ. 182 ರೂ.ನಲ್ಲಿ 28 ದಿನದ ವ್ಯಾಲಿಡಿಟಿ ಜೊತೆ ಪ್ರತಿದಿನ 2GB ಡೇಟಾ ಸಿಗುತ್ತದೆ.