ಟಾಲಿವುಡ್ ಸೂಪರ್ ಸ್ಟಾರ್ ಜ್ಯೂ.ಎನ್ಟಿಆರ್ (Jr.ntr) ಅವರು ಫ್ಯಾನ್ಸ್ಗೆ ಶುಭ ಸುದ್ದಿ ಸಿಕ್ಕಿದೆ. ಕ್ರಿಸ್ಮಸ್ ಸಂದರ್ಭದಲ್ಲಿ ಜಪಾನ್ಗೆ ತೆರಳಿದ್ದರು ತಾರಕ್. ಈ ವೇಳೆ, ಜಪಾನ್ನಲ್ಲಿ ಭೂಕಂಪವಾಗಿತ್ತು. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಆದರೆ ಇದೀಗ ಜ್ಯೂ.ಎನ್ಟಿಆರ್ ಜಪಾನ್ನಿಂದ ಸೇಫ್ ಆಗಿ ಮರಳಿದ್ದಾರೆ. ಮನೆಗೆ ಬರುತ್ತಿದ್ದಂತೆ ಫ್ಯಾನ್ಸ್ಗೆ ಈ ವಿಚಾರ ತಿಳಿಸಿದ್ದಾರೆ.
ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದೇವೆ. ಜಪಾನ್ನಲ್ಲಿ (Japan) ಭೂಕಂಪ ಆಗಿದ್ದು ಶಾಕಿಂಗ್ ಆಗಿದೆ. ನಾನು ಒಂದು ವಾರ ಅಲ್ಲಿಯೇ ಕಳೆದಿದ್ದೇನೆ. ಭೂಕಂಪದಿಂದ ಹಾನಿಗೆ ಒಳಗಾದವರ ಬಗ್ಗೆ ದುಃಖ ಇದೆ. ಅಲ್ಲಿನ ಜನ ಬೇಗ ಚೇತರಿಸಿಕೊಳ್ಳಲಿ. ದೃಢವಾಗಿರಿ ಜಪಾನ್ ಎಂದು ಜ್ಯೂ.ಎನ್ಟಿಆರ್ ಬರೆದುಕೊಂಡಿದ್ದಾರೆ
ತಾರಕ್ ಕ್ರಿಸ್ಮಸ್ ಸಂದರ್ಭದಲ್ಲಿ ಜಪಾನ್ಗೆ ತೆರಳಿದ್ದರು. ಇದೇ ವೇಳೆ, ಜಪಾನ್ನಲ್ಲಿ ಭೂಕಂಪ ಕೂಡ ಸಂಭವಿಸಿತ್ತು. ಹಾಗಾಗಿ ಅಲ್ಲಿಯೇ ಲಾಕ್ ಆಗಿದ್ದರು ತಾರಕ್. ಆದರೆ ಈಗ ಸುರಕ್ಷಿತವಾಗಿ ಮರಳುವ ಮೂಲಕ ಆತಂಕಕ್ಕೆ ಒಳಗಾಗಿದ್ದ ಫ್ಯಾನ್ಸ್ಗೆ ಗುಡ್ನ್ಯೂಸ್ ನೀಡಿದ್ದಾರೆ.
ದೇವರ’ (Devara) ಸಿನಿಮಾದಲ್ಲಿ ಪ್ರಸ್ತುತ ತಾರಕ್ ಬ್ಯುಸಿಯಾಗಿದ್ದಾರೆ. ಅವರ ಮುಂದೆ ಸೈಫ್ ಅಲಿ ಖಾನ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ (Janhvi Kapoor) ನಾಯಕಿಯಾಗಿ ನಟಿಸುತ್ತಿದ್ದಾರೆ.