ಬೆಂಗಳೂರು/ನವದೆಹಲಿ:- ಕೇಂದ್ರ ಸರ್ಕಾರದಿಂದ ನೌಕರರಿಗೆ ಭರ್ಜರಿ ಗುಡ್ನ್ಯೂಸ್ ಸಿಕ್ಕಿದ್ದು, ಸದ್ಯದಲ್ಲೇ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ. ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರ ನೌಕರರ ಖಾತೆಗೆ 11,250 ರೂ. ಹಣ ಜಮಾ ಮಾಡಲಿದೆ ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.53ಕ್ಕೆ ಏರಿಕೆ ಆಗಿತ್ತು. ಈ ತುಟ್ಟಿಭತ್ಯೆಯನ್ನು ಇಷ್ಟು ದಿನ ತಡೆ ಹಿಡಿಯಲಾಗಿತ್ತು. ಈಗ ತಡೆ ಹಿಡಿಯಲಾಗಿದ್ದ ಡಿಎ ಬಾಕಿ ಪಾವತಿಯನ್ನು ಬಜೆಟ್ನಲ್ಲಿ ಘೋಷಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಾದ ಬೆನ್ನಲ್ಲೇ ಕೇಂದ್ರ ನೌಕರರ ಖಾತೆಗೆ ಹಣ ಬರಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೆಲವು ಸಿಹಿ ಸುದ್ದಿಗಳು ಸಿಗಲಿವೆ.
ಇಷ್ಟೇ ಅಲ್ಲ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಬಜೆಟ್ನಲ್ಲಿ 8ನೇ ವೇತನ ಆಯೋಗದ ಮಾಹಿತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಹೊಸ ವೇತನ ಆಯೋಗದ ಬದಲು ಖಾಸಗಿ ವಲಯದಲ್ಲಂತೂ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಲಾಗುವುದು. ವೇತನ ಹೆಚ್ಚಳವನ್ನು ಲೆಕ್ಕಾಚಾರ ಮಾಡಲು iCreot ಸೂತ್ರವನ್ನು ಬಳಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.