ಬೆಂಗಳೂರು/ನವದೆಹಲಿ:- ರೈತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಕೇಂದ್ರ ಸರ್ಕಾರವು ಜನವರಿ 1ರಿಂದ ಜಾರಿಗೆ ಬರುವಂತೆ ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ ಘೋಷಿಸಿದೆ.
ನನ್ನ ಮನೆಗೆ ಮುತ್ತಿಗೆ ಹಾಕಲು ಬಿಜೆಪಿಗರನ್ನು ದಾರಾಳವಾಗಿ ಸ್ವಾಗತಿಸುತ್ತೇನೆ: ಪ್ರಿಯಾಂಕ ಖರ್ಗೆ!
ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರೈತರಿಗೆ ಸಮರ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಮರ್ಪಿಸಿ ಕೇವಲ ರೈತರಿಗೆ ಸಂಬಂಧಿಸಿದ ನಿರ್ಧಾರಗಳಿಗೆ ಕ್ಯಾಬಿನೆಟ್ ಅನುಮೋದನೆ ನಿಡಿದೆ.
ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯ ಬಜೆಟ್ 69,515 ಕೋಟಿ ರೂ.ಗೆ ಹೆಚ್ಚಳ ಮಾಡಿದೆ. ಇದರ ಜೊತೆ ಡಿಎಪಿ ರಸಗೊಬ್ಬರಕ್ಕೆ 3,850 ಕೋಟಿ ರೂ. ವಿಶೇಷ ಪ್ಯಾಕೇಜ್ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ.
ಈ ನಿರ್ಧಾರದಿಂದ ರೈತರು 50 ಕೆಜಿ ತೂಕದ ಡಿಎಪಿ ರಸಗೊಬ್ಬರವನ್ನು 1,350 ರೂ. ಚಿಲ್ಲರೆ ದರದಲ್ಲಿ ಖರೀದಿಸಬಹುದು. ಈ ಸಬ್ಸಿಡಿ ಜನವರಿ 1ರಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿದೆ
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ರೈತರು 1,350 ರೂ.ಗೆ 50 ಕೆಜಿ ಡಿಎಪಿ ರಸಗೊಬ್ಬರ ಖರೀದಿ ಮಾಡುವುದನ್ನು ಮುಂದುವರಿಸಬಹುದು. ಬೇರೆ ದೇಶಗಳಲ್ಲಿ 50 ಕೆಜಿ ರಸಗೊಬ್ಬರಕ್ಕೆ 3 ಸಾವಿರ ರೂ.ಗೂ ಅಧಿಕ ವೆಚ್ಚವಾಗುತ್ತದೆ. 2014-24 ಅವಧಿಯಲ್ಲಿ ರೈತರಿಗಾಗಿ 11.9 ಲಕ್ಷ ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. 2004-14ರ ಅವಧಿಗೆ ಹೋಲಿಸಿದರೆ ಸಬ್ಸಿಡಿ ಪ್ರಮಾಣ ದುಪ್ಪಟ್ಟಾಗಿದೆ ಎಂದು ತಿಳಿಸಿದರು.
2024 ರಿಂದ ಕೋವಿಡ್ ಮತ್ತು ಯುದ್ಧ ಸಂಬಂಧಿತ ಅಡೆತಡೆಗಳಿಂದ ಉಂಟಾದ ಮಾರುಕಟ್ಟೆ ಏರಿಳಿತಗಳ ಭಾರವನ್ನು ರೈತರು ಭರಿಸಬೇಕಾಗಿಲ್ಲ. ಜಾಗತಿಕ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಎಪಿ ರಸಗೊಬ್ಬರ ಬೆಲೆ ಏಕಾಏಕಿ ಬದಲಾವಣೆಯಾಗುತ್ತಿದೆ. ಈ ಕಾರಣಕ್ಕೆ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.