ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅಂದರೆ ತಂಡಕ್ಕೆ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಇದೆ. ಎಂದರೆ ಮೆಗಾ ಹರಾಜಿಗೆ ಮುನ್ನ ಆರ್ಸಿಬಿ ಮೂವರು ಆಟಗಾರರ ಮೇಲೆ ಆರ್ಟಿಎಂ ಕಾರ್ಡ್ ಬಳಕೆ ಮಾಡಬಹುದು. ಆರ್ಟಿಎಂ ಕಾರ್ಡ್ ಮೂಲಕ ಹರಾಜಿನ ಸಂದರ್ಭದಲ್ಲಿ ತಂಡಕ್ಕೆ ಸೇರಿಸಿಕೊಳ್ಳಬಹುದು.
ಅಯೋಧ್ಯೆಯ ಅಡಿಪಾಯ ಅಲ್ಲಾಡಿಸುತ್ತೇವೆ – ಖಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆ
ಗರಿಷ್ಠ ಆರು ಆಟಗಾರರ ರೀಟೈನ್ಗೆ ಅವಕಾಶ ಇತ್ತು. ಅಲ್ಲದೆ ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ ಮಾಡಬಹುದಾಗಿ ಸಹ ತಿಳಿಸಿತ್ತು. ಯಾವ ಟೀಮ್ ಎಷ್ಟು ಜನರನ್ನು ರೀಟೈನ್ ಮಾಡಿಕೊಂಡಿದೆ ಅನ್ನೋದರ ಮೇಲೆ ಆರ್ಟಿಎಂ ಕಾರ್ಡ್ ಸಂಖ್ಯೆ ಇರಲಿದೆ. ಆರ್ಸಿಬಿ ಕೇವಲ ಮೂವರು ಆಟಗಾರರಿಗೆ ಮಾತ್ರ ಮಣೆ ಹಾಕಿದ್ದು, ಇನ್ನೂ ಐಪಿಎಲ್ ಮೆಗಾ ಹರಾಜಿನಲ್ಲಿ 3 ರೈಟ್ ಟು ಮ್ಯಾಚ್ ಕಾರ್ಡ್ ಬಳಸುವ ಅವಕಾಶ ಹೊಂದಿದೆ.
ಆರ್ಸಿಬಿ ತಂಡ ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ವಿಲ್ ಜಾಕ್ಸ್ ಅವರನ್ನು ಬಿಡುಗಡೆ ಮಾಡಿದೆ. ಹರಾಜಿಗೂ ಮುನ್ನ ಈ ಮೂವರ ಮೇಲೆ ಆರ್ಸಿಬಿ ಆರ್ಟಿಎಂ ಬಳಸಲಿದೆ. ಆಗ ಸಿರಾಜ್, ಮ್ಯಾಕ್ಸ್ವೆಲ್, ವಿಲ್ ಜಾಕ್ಸ್ ಮೇಲಿನ ಹಕ್ಕು ಆರ್ಸಿಬಿ ಬಳಿಯೇ ಇರುತ್ತದೆ. ಯಾರಾದ್ರೂ ಇವರನ್ನು ಬಿಡ್ ಮಾಡಿದ್ರೆ ಅಷ್ಟು ದುಡ್ಡು ಕೊಟ್ಟು ಆರ್ಸಿಬಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು. ಹೀಗೆ ಸಿರಾಜ್, ಮ್ಯಾಕ್ಸ್ವೆಲ್, ವಿಲ್ ಜಾಕ್ಸ್ ಅವರನ್ನು ಉಳಿಸಿಕೊಳ್ಳಲಿದೆ.