ಬೆಂಗಳೂರು:- ಕುಡುಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಜುಲೈ 1ರಿಂದ ದುಬಾರಿ ಮದ್ಯದ ದರ ಕಡಿಮೆಗೆ ಸಿಗಲಿದೆ ಎನ್ನಲಾಗಿದೆ. ಅಲ್ಲದೇ ಸದ್ಯಕ್ಕೆ ಲಿಕ್ಕರ್ ಬೆಲೆ ಹೆಚ್ಚಳದ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದ ಕಲಬುರಗಿಯಲ್ಲಿ ಅಬಕಾರಿ ಸಚಿವ ಆರ್.ವಿ ತಿಮ್ಮಾಪುರ ತಿಳಿಸಿದ್ದಾರೆ.
Nelamangala: ನಾಲ್ಕನೇ ಪತ್ನಿಗಾಗಿ 3ನೇ ಪತ್ನಿಯ ಚಿನ್ನ ಕದ್ದ ಗಂಡ.. ಮಗನಿಂದಲೇ ಬಿತ್ತು ಗೂಸಾ..!
ಗ್ಯಾರಂಟಿಗಳಿಗೆ ಹಣ ಇಲ್ಲದಕ್ಕೆ ಬೆಲೆ ಏರಿಕೆ ಮಾಡ್ತಿದ್ದಾರೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ಬಾರಿ ಬೆಲೆ ಏರಿಕೆ ಮಾಡಿದ್ದಾರೆ ಅಂತ ಗೊತ್ತಿದೆ. ಬಿಜೆಪಿಯವರು ಬೆಲೆ ಏರಿಕೆ ಮಾಡಿದಾಗ ನಡೆಯುತ್ತೆ, ನಾವು ಮಾಡುವ ಇದಾಗ ಎಲ್ಲರೂ ಮಾತಾಡ್ತಾರೆ. ವಿಪಕ್ಷ ನಾಯಕರಗೆ ಮಾತನಾಡಲು ಯೋಗ್ಯತೆ ಬೇಕು. ಆದರೆ ಲಿಕ್ಕರ್ ಬೆಲೆ ಏರಿಕೆ ಮಾಡುವುದಾದರೆ ನಿಮಗೆ ತಿಳಿಸುತ್ತೇನೆ, ಜುಲೈ 1ಕ್ಕೆ ನಿಮಗೆ ತಿಳಿಸುತ್ತೇನೆ ಎಂದು ಹೇಳಿದರು.
ಅಲ್ಲದೇ, ಹೊರ ರಾಜ್ಯದಿಂದ ಬರುವ ಮದ್ಯವನ್ನು ತಡೆಗಟ್ಟಲು ಪ್ರಯತ್ನ ಮಾಡುತ್ತಿದ್ದೇವೆ. ಬೆಳಗಾವಿ ಜಿಲ್ಲೆಯ ರಾಯಭಾಗ್ ತಾಲೂಕಿನಿಂದ ಸರ್ಕಾರಿ ಸೌಮ್ಯದ 1 ಕೋಟಿ ಮೌಲ್ಯದ ಮದ್ಯ ತುಂಬಿದ್ದ ಲಾರಿ ಅಪಘಾತಕ್ಕೆ ಒಳಗಾಗಿದೆ. ಆದರೆ ಫರಹತಾಬಾದ್ ಬಳಿ ನಡೆದ ಘಟನೆ ನನ್ನ ಗಮನಕ್ಕೆ ಬಂದಿಲ್ಲಾ ಇವತ್ತು ಇದರ ಬಗ್ಗೆ ಚರ್ಚೆ ಮಾಡುವೆ ಅಂತ ಸಚಿವರು ತಿಳಿಸಿದರು. ಆದರೆ ದೊಡ್ಡ ಪ್ರಮಾಣದಲ್ಲಿ ದುರ್ಘಟನೆ ನಡೆದಿದ್ದರೂ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಇನ್ನು ಇದೇ ವೇಳೆ ರಾಜ್ಯ ಸರ್ಕಾರ ಹೊರ ರಾಜ್ಯಗಳ ಮದ್ಯದ ದರವನ್ನು ಗಮನದಲ್ಲಿಟ್ಟುಕೊಂಡು ಮಹತ್ವ ನಿರ್ಧಾರ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜುಲೈ 1ರಿಂದ ದುಬಾರಿ ಮದ್ಯದ ದರ ಅಗ್ಗ ಆಗಲಿದೆ. ಹೊರ ರಾಜ್ಯಗಳ ಮದ್ಯದ ಪಟ್ಟಿಯನ್ನು ಆಧರಿಸಿ 16 ಸ್ಲ್ಯಾಬ್ ಗಳ ಹೊರ ದರವನ್ನು ನಿಗದಿ ಮಾಡಲಾಗಿದೆ ಎನ್ನಲಾಗಿದೆ.
ದರ ಇಳಿಕೆ ಸಂಬಂಧ ರಾಜ್ಯ ಸರ್ಕಾರ ಕರಡು ಅಧಿಸೂಚನೆಯನ್ನು ಪ್ರಕಟ ಮಾಡಿದೆ. ಇದರಂತೆ 750ಎಂಎಲ್ ಗಾತ್ರದ ಮದ್ಯದ ಬಾಟಲಿ ದರ 2000 ಸಾವಿರ ರೂಪಾಯಿಯಿಂದ 1800 ಆಗಲಿದೆ. 5 ಸಾವಿರ ರೂಪಾಯಿ ಇರುವ ಬಾಟಲಿ ಬೆಲೆ 3600-3700 ರೂಪಾಯಿ ಆಗಲಿದೆ. 7100 ರೂಪಾಯಿ ಇರುವ ಮದ್ಯದ ಬಾಟಲಿ ಬೆಲೆ 5200 ರೂಪಾಯಿಗೆ ಇಳಿಕೆ ಆಗಲಿದೆ. ಶೀಘ್ರವೇ ಮದ್ಯದ ಪರಿಷ್ಕೃತ ದರ ಪಟ್ಟಿ ಪ್ರಕಟ ಆಗುವ ನಿರೀಕ್ಷೆ ಇದೆ
ಆದರೆ, ಸರ್ಕಾರ ನೂತನ ನೀತಿಯಿಂದ ಮದ್ಯದ ದರದಲ್ಲಿ ಏರಿಕೆ- ಇಳಿಕೆ ಆಡ ಶುರುವಾಗಲಿದೆಯಂತೆ. ಜುಲೈ 1ರಿಂದ ಕೆಲ ಅಗ್ಗದ ದರದ ಮದ್ಯಗಳ ಬೆಲೆ ಏರಿಕೆ ಆಗುವ ನಿರೀಕ್ಷೆ ಇದೆ. ಇತ್ತ ಕೆಲವರು ದುಬಾರಿ ಮದ್ಯಗಳ ದರದಲ್ಲಿ ಇಳಿಕೆ ಆಗಲಿದೆ ಎನ್ನಲಾಗಿದೆ.