ಬೆಂಗಳೂರು:- ಭಕ್ತಾದಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮನೆ ಬಾಗಿಲಿಗೆ ಪ್ರಸಾದ ತಲುಪಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದೆ.
ಮುಜುರಾಯಿ ಸಚಿವರ ಜೊತೆ ಚರ್ಚೆ ಮಾಡಿ ಶೀಘ್ರದಲ್ಲೇ ಜಾರಿ ಮಾಡಲಾಗುವುದು ಎಂದು ಮುಜುರಾಯಿ ಇಲಾಖೆ ಆಯುಕ್ತ ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಸದ್ಯ ಮುಜರಾಯಿ ಇಲಾಖೆ ಹೊಸ ಹೊಸ ತಂತ್ರಜ್ಞಾನವನ್ನ ಅಳವಡಿಸಿಕೊಂಡು ಜನರಿಗೆ ಸೇವೆ ನೀಡಲು ಹಲವಾರು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈಗಾಗಲೇ ಆನ್ ಲೈನ್ ಸೇವೆ, ಬುಕ್ಕಿಂಗ್ ಅಂತಾ ಜಾರಿ ಆಗಿದೆ. ಈಗ ಮತ್ತೊಂದು ಹೊಸ ಯೋಜನೆ ಜಾರಿಗೆ ಪ್ಲ್ಯಾನ್ ಮಾಡಲಾಗುತ್ತಿದೆ. ಇನ್ನು ಈ ಹೊಸ ಯೋಜನೆಯಿಂದ ಮನೆಯಲ್ಲೇ ಕುಳಿತು ಪ್ರಸಿದ್ದ ದೇವಾಲಯಗಳ ಪ್ರಸಾದವನ್ನ ಸ್ವೀಕರಿಬಹುದಾಗಿದೆ
ಕರ್ನಾಟಕ ರಾಜ್ಯ ವ್ಯಾಪಿ ಇರುವ ಯಾವುದೇ ದೇವಸ್ಥಾನ ಪ್ರಸಾದವನ್ನ ಆನ್ ಲೈನ್ಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಪ್ರಸಾದ ತಂದು ಕೊಡುವ ಯೋಜನೆ ಶೀಘ್ರವೇ ಜಾರಿಗೆ ತರಲು ಚಿಂತನೆ ನಡೆದಿದೆ. ಈ ಕುರಿತಾಗಿ ಅಂಚೆ ಇಲಾಖೆ ಮತ್ತು ಖಾಸಗಿ ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ. ಪ್ರಸಾದಕ್ಕೆ ಎಷ್ಟು ದರ ಇದೆಯೋ ಅದರ ಜೊತೆಗೆ ಡೆಲಿವರಿ ದರ ಸೇರಿಸಿ ಮನೆ ಬಾಗಿಲಿಗೆ ಪ್ರಸಾದ ನೀಡುವ ದರವನ್ನು ನಿಗದಿ ಮಾಡಲಾಗುತ್ತಿದೆ.