ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ವಿರಾಟ್, ಬಾಬರ್ ಅಜಂ ಒಟ್ಟಿಗೆ ಕ್ರಿಕೆಟ್ ಆಡಲಿದ್ದಾರೆ ಎನ್ನಲಾಗಿದೆ.
ಆಫ್ರೋ-ಏಷ್ಯಾ ಕಪ್ ಮತ್ತೆ ಪ್ರಾರಂಭವಾಗಲಿದೆ. ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್ ಶನಿವಾರ ವಾರ್ಷಿಕ ಸಭೆ ನಡೆಸಿದೆ. ಈ ವೇಳೆ ಆರು ಜನರ ನೇತೃತ್ವದ ಮಧ್ಯಂತರ ಸಮಿತಿ ರಚಿಸಲಾಗಿದೆ. ಇದು ಏಷ್ಯನ್ ಮತ್ತು ಆಫ್ರಿಕನ್ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿಕೊಡಲಿದೆ.
ಮುಡಾ ಹಗರಣ: 2 ಗಂಟೆ Lokayukta ವಿಚಾರಣೆ ಮುಗಿಸಿ ಕೂಲಾಗಿ ಹೊರಟ CM ಸಿದ್ದರಾಮಯ್ಯ!
ಈ ಬಾರಿಯ ಟೂರ್ನಿಯಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಬಾಬರ್ ಅಜಂ ಒಟ್ಟಿಗೆ ಆಡಲಿದ್ದಾರೆ.
ಏಷ್ಯಾ XI ಮತ್ತು ಆಫ್ರಿಕಾ XI ತಂಡಗಳು ಆಫ್ರೋ-ಏಷ್ಯಾ ಕಪ್ನಲ್ಲಿ ಮುಖಾಮುಖಿ ಆಗುತ್ತವೆ. 2005ರಲ್ಲಿ ಮೊದಲು ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿಸಲಾಯಿತು. 2007ರಲ್ಲಿ ಭಾರತ ಕೂಡ ಆಯೋಜಿಸಿತ್ತು. ಮೂರನೇ ಆವೃತ್ತಿಯನ್ನು 2009ರಲ್ಲಿ ಕೀನ್ಯಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆ ವರ್ಷ ಆಫ್ರೋ-ಏಷ್ಯಾ ಕಪ್ ನಡೆಸಲು ಸಾಧ್ಯವಾಗಲಿಲ್ಲ. ಈ ಪಂದ್ಯಾವಳಿ ತುಂಬಾ ವಿಶೇಷವಾಗಿದ್ದು, ಭಾರತ ಮತ್ತು ಪಾಕಿಸ್ತಾನಿ ಆಟಗಾರರು ಒಟ್ಟಿಗೆ ಆಡುವುದನ್ನು ಕಾಣಬಹುದಾಗಿದೆ.
ಎಸಿಎ ಹಂಗಾಮಿ ಅಧ್ಯಕ್ಷ ತವೆಂಗಾ ಮುಕುಲಾನಿ ಮಾಹಿತಿ ನೀಡಿ.. ಕ್ರಿಕೆಟ್ನಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವುದರ ಜೊತೆಗೆ, ಆಫ್ರೋ-ಏಷ್ಯಾ ಕಪ್ ಎರಡೂ ತಂಡಗಳಿಗೆ ಆರ್ಥಿಕವಾಗಿ ಲಾಭದಾಯಕ. ನಾವು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್ಗಳನ್ನೂ ಸಂಪರ್ಕಿಸಿದ್ದೇವೆ. ಅವರೆಲ್ಲರೂ ಆಫ್ರೋ-ಏಷ್ಯಾ ಕಪ್ ಪುನರಾರಂಭಿಸುವ ಪರವಾಗಿದ್ದಾರೆ ಎಂದಿದ್ದಾರೆ.