ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಉತ್ತಮ ಸೇವೆ ಕೊಡುವಲ್ಲಿ ಯಶಸ್ವಿಯಾಗಿದೆ. ಇದೀಗ BSNL ತನ್ನ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್ ಒಂದು ಸಿಕ್ಕಿದ್ದು, 2025ರ ಹೊಸವರ್ಷದಿಂದ ಅಂದ್ರೆ ಜನವರಿಯಿಂದ 5G ನೆಟ್ವರ್ಕ್ ಕೊಡಲು BSNL ತಯಾರಿ ನಡೆಸಿದೆ.
ಬದುಕಿರುವ ತಮ್ಮನನ್ನೇ ಸಾಯಿಸಿದ ಅಣ್ಣ: ಅಯ್ಯೋ ಆಸ್ತಿಗಾಗಿ ಇಂಗೂ ಮಾಡ್ತಾರಾ!? ಓಡೋಡಿ ಬಂದ ತಮ್ಮ ಹೇಳಿದ್ದೇನು?
2025ರ ಜನವರಿಯಲ್ಲಿ BSNL, 5G ಸೇವೆಯನ್ನು ಪ್ರಾರಂಭಿಸಲಿದೆ ಎಂದು ಆಂಧ್ರಪ್ರದೇಶದ ಪ್ರಧಾನ ಜನರಲ್ ಮ್ಯಾನೇಜರ್ ಎಲ್.ಶ್ರೀನು ಮಾಹಿತಿ ನೀಡಿದ್ದಾರೆ. 5G ಸೇವೆ ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಸಾಧ್ಯವಾದಷ್ಟು ಬೇಗ 5G ರೋಲ್ಔಟ್ಗೆ ಅನುಕೂಲವಾಗಲು ಕಂಪನಿ ಸಿದ್ಧತೆ ನಡೆಸ್ತಿದೆ. ಅಂದರೆ 5G ಸೇವೆ ಒದಗಿಸಲು ಬೇಕಾದ ಮೂಲ ಸೌಕರ್ಯಗಳತ್ತ ಗಮನ ನೀಡಲಾಗುತ್ತಿದೆ ಎಂದಿದ್ದಾರೆ.
ಬಿಎಸ್ಎನ್ಎಲ್ 4G ಸೇವೆಯಿಂದ 5Gಗೆ ಶಿಫ್ಟ್ ಆಗಲು ತಯಾರಿ ನಡೆಸ್ತಿದೆ. 2025 ಜನವರಿಯಿಂದ ಬಹುತೇಕ ನಗರಗಳಲ್ಲಿ ಬಿಎಸ್ಎನ್ಎಲ್ 5G ನೆಟ್ವರ್ಕ್ ಪಡೆಯಲಿದೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಕೆಲವು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದೆ. 5 ನೆಟ್ವರ್ಕ್, ಕಡಿಮೆ ಬೆಲೆಗೆ ರೀಚಾರ್ಜ್ ಪ್ಲಾನ್ ಪರಿಚಯಿಸುತ್ತಿರುವ ಬಿಎಸ್ಎನ್ಎಲ್, ಖಾಸಗಿ ಟೆಲಿಕಾಮ್ ಸಂಸ್ಥೆಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಇದೀಗ ಅದೇ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಗುಡ್ನ್ಯೂಸ್ ಒಂದನ್ನು ನೀಡಿದೆ.
ಸರ್ಕಾರಿ ಸ್ವಾಮ್ಯದ BSNL ಸಂಸ್ಥೆಗೆ ಸೆಪ್ಟೆಂಬರ್ ಒಂದೇ ತಿಂಗಳಲ್ಲಿ 8 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಟ್ರಾಯ್ ನೀಡಿದ್ದು, ಬಿಎಸ್ಎನ್ಎಲ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ ಎಂದು ತಿಳಿಸಿದೆ.
ಇದೀಗ ಬಿಎಸ್ಎನ್ಎಲ್ 91.89 ಲಕ್ಷ ಗ್ರಾಹಕರನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಶೇಕಡಾ 7.98ಕ್ಕೆ ಏರಿಕೆ ಮಾಡಿಕೊಂಡಿದೆ. ಖಾಸಗಿ ಸಂಸ್ಥೆಗಳಾದ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ದರ ಹೆಚ್ಚಳ ಮಾಡಿರೋದ್ರಿಂದ ಗ್ರಾಹಕರನ್ನ ಕಳೆದುಕೊಳ್ತಿವೆ. ಸದ್ಯ ಸಾಕಷ್ಟು ಮಂದಿ ಸಿಮ್ಗಳನ್ನ ಬಿಎಸ್ಎನ್ಎಲ್ಗೆ ಪೋರ್ಟ್ ಮಾಡಿಸಿಕೊಳ್ತಿದ್ದಾರೆ.