ತಿರುವನಂತಪುರಂ: ಕೇರಳದ ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಯಾತ್ರಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್ನಲ್ಲಿ `ಇರುಮುಡಿ’ಯನ್ನು ಸಾಗಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ತಿಳಿಸಿದರು. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಅವರು, ನವೆಂಬರ್ ಮಧ್ಯದಿಂದ ಜನವರಿಯ ಕೊನೆಯವರೆಗೆ ಶಬರಿಮಲೆಗೆ ಯಾತ್ರಾರ್ಥಿಗಳು ತೆರಳುತ್ತಾರೆ. 2025ರ ಜನವರಿ 20ರವರೆಗೆ ಯತಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್ನಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಪ್ರಯಾಣಿಸಬಹುದು ಹಾಗೂ ಈ ಸೀಮಿತ ಅವಧಿಯಲ್ಲಿ ಮಾತ್ರ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ ಎಂದು ತಿಳಿಸಿದರು.
ಸದ್ಯದ ನಿಯಮಗಳ ಪ್ರಕಾರ ವಿಮಾನಗಳ ಕ್ಯಾಬಿನ್ ಬ್ಯಾಗ್ನಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅನುಮತಿಯಿಲ್ಲ. ಶಬರಿಮಲೆಗೆ ಹೋಗುವವರಿಗೆ ಯಾತ್ರೆ ಸುಲಭವಾಗಿರಲಿ ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಯ ಅವಧಿಯಲ್ಲಿ `ಇರುಮುಡಿ’ಯಲ್ಲಿ (ತುಪ್ಪ ತುಂಬಿದ ತೆಂಗಿನಕಾಯಿ ಸೇರಿದಂತೆ ಅರ್ಪಣೆಗಳನ್ನು ಹೊಂದಿರುವ ಪವಿತ್ರ) ತೆಂಗಿನಕಾಯಿಯನ್ನು ಸಾಗಿಸಲು ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು. ಈ ಆದೇಶವು 2025ರ ಜನವರಿ 20ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಅಗತ್ಯವಿರುವ ಎಕ್ಸ್-ರೇ, ಇಟಿಡಿ (ಎಕ್ಸ್ಪ್ಲೋಸಿವ್ ಟ್ರೇಸ್ ಡಿಟೆಕ್ಟರ್) ಮತ್ತು ಭೌತಿಕ ತಪಾಸಣೆ ಹೀಗೆ ಭದ್ರತಾ ತಪಾಸಣೆಗಳ ಬಳಿಕವೇ ಅನುಮತಿ ನೀಡಲಾಗುವುದು ಎಂದರು.
Cooking Oil: ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವುದರಿಂದ ಆಗುವ ತೊಂದರೆಗಳೇನು ಗೊತ್ತಾ..?
ಒಟ್ಟು ಎರಡು ತಿಂಗಳ ಕಾಲ ಅಂದರೆ ಜನವರಿ ಅಂತ್ಯದವರೆಗೆ ತೀರ್ಥಯಾತ್ರೆಗಾಗಿ ಶಬರಿಮಲೆಯ ಅಯ್ಯಪ್ಪ ದೇವಾಲಯವು ತೆರೆದಿರುತ್ತದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ. ಜೊತೆಗೆ `ಇರುಮುಡಿ ಕೆಟ್ಟು’ (ತುಪ್ಪ ತುಂಬಿದ ತೆಂಗಿನಕಾಯಿ ಸೇರಿದಂತೆ ಅರ್ಪಣೆಗಳನ್ನು ಹೊಂದಿರುವ ಪವಿತ್ರ ಚೀಲವನ್ನು ಭಗವಂತನಿಗೆ ಕೊಂಡೊಯ್ಯತ್ತಾರೆ).
ಸಾಮಾನ್ಯವಾಗಿ, ಶಬರಿಮಲೆಗೆ ಯಾತ್ರೆ ಕೈಗೊಳ್ಳುವವರು `ಕೆಟ್ಟುನಿರಕಲ್’ ಆಚರಣೆಯ ಭಾಗವಾಗಿ `ಇರುಮುಡಿ ಕೆಟ್ಟು’ ಸಿದ್ಧಪಡಿಸುತ್ತಾರೆ. ಆಚರಣೆಯ ಸಮಯದಲ್ಲಿ, ತೆಂಗಿನಕಾಯಿಯೊಳಗೆ ತುಪ್ಪ ತುಂಬಿಸಲಾಗುತ್ತದೆ. ನಂತರ ಅದನ್ನು ಇತರ ನೈವೇದ್ಯಗಳೊಂದಿಗೆ ಚೀಲದಲ್ಲಿ ಇರಿಸಲಾಗುತ್ತದೆ. ತೀರ್ಥಯಾತ್ರೆಯ ಸಮಯದಲ್ಲಿ ವಿವಿಧ ಪವಿತ್ರ ಸ್ಥಳಗಳಲ್ಲಿ ಒಡೆಯಲು ಹೆಚ್ಚಿನ ತೆಂಗಿನಕಾಯಿಗಳನ್ನು ಇರಿಸಿರಲಾಗುತ್ತದೆ.
`ಇರುಮುಡಿ ಕಟ್ಟೆ’ಯನ್ನು ತಲೆಯ ಮೇಲೆ ಹೊತ್ತ ಯಾತ್ರಾರ್ಥಿಗಳಿಗೆ ಮಾತ್ರ ದೇವಾಲಯದ ಗರ್ಭಗುಡಿಯನ್ನು ತಲುಪಲು 18 ಪವಿತ್ರ ಮೆಟ್ಟಿಲುಗಳನ್ನು ಹತ್ತಲು ಅನುಮತಿಸಲಾಗುತ್ತದೆ. ಅದನ್ನು ಹೊತ್ತುಕೊಳ್ಳದವರು ಗರ್ಭಗುಡಿಯನ್ನು ತಲುಪಲು ಬೇರೆ ಮಾರ್ಗದ ಮೂಲಕ ಗರ್ಭಗುಡಿಗೆ ಹೋಗಬೇಕು.