ಬೆಂಗಳೂರು: ಮದ್ಯವ್ಯಸನಿಗಳು ಭಾರತದಲ್ಲಿ ಏನು ಕಮ್ಮಿ ಇಲ್ಲ. ಇನ್ನೂ ಕರ್ನಾಟಕದಲ್ಲಿ ಕೂಡ ಜನರು ಊಟದ ರೀತಿಯಲ್ಲೇ ಮದ್ಯಪಾನ ಕೂಡ ಮಾಡುತ್ತಾರೆ. ಇನ್ನೂ ಈ ಮದ್ಯಪಾನದಿಂದ ಹಲವು ಸಮಸ್ಯೆಗಳು ಉಂಟಾಗುತ್ತವೆ ಎಂಬುದು ತಿಳಿದಿದ್ದರೂ ಕೂಡ ಮದ್ಯಪ್ರಿಯರು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದಲೇ ಮದ್ಯಪಾನ ಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಸಾಮಾನ್ಯವಾಗಿ ಬೇಸಿಗೆ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಬಿಯರ್ ಮಾರಾಟ ಹೆಚ್ಚಾಗುತ್ತದೆ. ಅದೇ ರೀತಿ ಚಳಿಗಾಲ ಆರಂಭವಾಗುತ್ತಿದ್ದರಂತೆ ಪ್ರತಿ ವರ್ಷ ಬಿಯರ್ ಮಾರಾಟ ಕುಸಿತವಾಗುತ್ತದೆ. ಹೀಗಾಗಿ ಚಳಿಗಾಲ ಶುರುವಾಗುತ್ತಿದ್ದಂತೆ ಬಿಯರ್ ಬಗ್ಗೆ ಅಬಕಾರಿ ಇಲಾಖೆಗೆ ಟೆನ್ಷನ್ ಶುರುವಾಗಿದೆ. ಯಾಕೆಂದರೆ ಚಳಿಗಾಲದಲ್ಲಿ ಮದ್ಯಪ್ರಿಯರು ಹೆಚ್ಚಾಗಿ ಬಿಯರ್ ಕುಡಿಯಲ್ಲ. ಇದರಿಂದ ಬಿಯರ್ ಮಾರಾಟ ಕುಸಿತವಾಗುವ ಆತಂಕ ಎದುರಾಗಿದೆ. ಶೇಕಡಾ 10 ರಿಂದ 20 ರಷ್ಟು ಬಿಯರ್ ಮಾರಾಟದಲ್ಲಿ ಕುಸಿತ ಸಾಧ್ಯತೆ ಇದೆ.
ರೈತರ ಗಮನಕ್ಕೆ.. ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ರೂಲ್ಸ್.! ಈ ಕೆಲಸ ಮಾಡದಿದ್ರೆ ಬರಲ್ಲ 19ನೇ ಕಂತಿನ ಹಣ!?
ಅಬಕಾರಿ ಇಲಾಖೆಗೆ ಸರ್ಕಾರ 36 ಸಾವಿರ ಕೋಟಿ ಟಾರ್ಗೆಟ್ ನೀಡಿದೆ. ಇದೇ ಕಾರಣಕ್ಕೆ ಬಿಯರ್ ದರ ಹೆಚ್ಚಳ ಮಾಡಲು ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಬಿಯರ್ ದರ ಏರಿಕೆಯಾದರೆ ಆದಾಯಕ್ಕೆ ಹೊಡೆತ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಜನವರಿವರೆಗೆ ಬೆಲೆಯಲ್ಲಿ ಯಾವುದೇ ಏರಿಕೆ ಮಾಡುವುದಿಲ್ಲ ಎಂದಿದೆ.