ಬೆಂಗಳೂರು: ಇತ್ತೀಚೆಗೆ ಟೆಲಿಕಾಂ ಕಂಪನಿಗಳಲ್ಲಿ ಏರ್ಟೆಲ್ ಬಹಳಷ್ಟು ಮುನ್ನಡೆಯಲ್ಲಿದೆ. ಈ ಕಂಪನಿಗಳು ತನ್ನ ಗ್ರಾಹಕರಿಗೆ ಏನಾದರೊಂದು ಆಫರ್ಗಳನ್ನು ನೀಡುತ್ತಲೇ ಬರುತ್ತಿದೆ. ಇದು ನೀಡುವಂತಹ ಯೋಜನೆಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿರುತ್ತದೆ. ಇತ್ತೀಚೆಗೆ ಏರ್ಟೆಲ್ ತನ್ನ ಕಂಪನಿಯಿಂದ ಪ್ರಿಪೇಯ್ಡ್ ಪ್ಲಾನ್ನ ಯೋಜನೆಯ ದರವನ್ನು ಏರಿಕೆ ಮಾಡಿತ್ತು. ಆದರೆ ಈಗ ಮತ್ತೆ ಗ್ರಾಹಕರಿಗೆ ಆಫರ್ಅನ್ನು ನೀಡುತ್ತಿದೆ.
ಏರ್ಟೆಲ್ನ 365 ದಿನಗಳ ರೀಚಾರ್ಜ್ ಪ್ಲಾನ್ ತಿಂಗಳಿಗೆ 300 ರೂಗೆ ಆಕರ್ಷಕ ಡಾಟಾ ಪ್ಯಾಕೇಜ್ ಒದಗಿಸುತ್ತದೆ. ಏರ್ಟೆಲ್ ಬಳಿ 365 ದಿನಗಳಿಗೆ ವ್ಯಾಲಿಡಿಟಿ ಇರುವ ಮೂರು ರೀಚಾರ್ಜ್ ಪ್ಲಾನ್ಗಳಿವೆ. 1,999 ರೂ, 3,599 ರೂ ಮತ್ತು 3,999 ರೂ ರೀಚಾರ್ಜ್ ಪ್ಲಾನ್ಗಳಿವೆ. ಇದರಲ್ಲಿ 1,999 ರೂ ಪ್ಲಾನ್ನಲ್ಲಿ ಒಟ್ಟಾರೆ 24 ಜಿಬಿ ಡಾಟಾ ಮಾತ್ರವೇ ಸಿಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ..?
3,599 ರೂ ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಹೈಸ್ಪೀಡ್ ಡಾಟಾ ಉಚಿತವಾಗಿ ಸಿಗುತ್ತದೆ. ಇದರಲ್ಲಿ ಅನ್ಲಿಮಿಟೆಡ್ 5ಜಿ ಡಾಟಾ ಸೌಲಭ್ಯ ಇರುತ್ತದೆ. ಅಂದರೆ 5ಜಿ ನೆಟ್ವರ್ಕ್ ಇರುವ ಪ್ರದೇಶಗಳಲ್ಲಿ ನೀವು ಮುಕ್ತವಾಗಿ 5ಜಿ ಡಾಟಾ ಬಳಸಬಹುದು. ಈ ರೀಚಾರ್ಜ್ ಪ್ಲಾನ್ನಲ್ಲಿ ಅಪೋಲೋ ಸರ್ಕಲ್ ಸೌಲಭ್ಯವನ್ನು ಮೂರು ತಿಂಗಳು ಉಚಿತವಾಗಿ ಪಡೆಯಬಹುದು. ವಿಂಕ್ ಹಲೋ ಟ್ಯೂನ್, ವಿಂಕ್ ಮ್ಯೂಸಿಕ್ ಸೇವೆ ಪಡೆಯಬಹುದು. ಇವೆಲ್ಲವೂ ನಿಮಗೆ ತಿಂಗಳಿಗೆ 300 ರೂ ಬೆಲೆಗೆ ಸಿಗುತ್ತದೆ.
3,999 ರೂ ಪ್ಲಾನ್ನಲ್ಲಿ ದಿನಕ್ಕೆ ಎರಡೂವರೆ ಜಿಬಿ ಡಾಟಾವನ್ನು 365 ದಿನಗಳ ಕಾಲ ಪಡೆಯಬಹುದು. 3,599 ರೂ ಪ್ಲಾನ್ನಲ್ಲಿ ಸಿಗುವ ಎಲ್ಲಾ ಸೌಲಭ್ಯಗಳೂ ಈ ಪ್ಲಾನ್ನಲ್ಲಿ ಸಿಗುತ್ತದೆ. ಜೊತೆಗೆ ಡಿಸ್ನಿ ಹಾಟ್ಸ್ಟಾರ್ಗೆ 1 ವರ್ಷದ ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. ಇದರ ಮೌಲ್ಯ 499 ರೂ ಆಗುತ್ತದೆ. ಅಂದರೆ ಕೇವಲ 333 ರೂಗೆ ಇವೆಲ್ಲವೂ ನಿಮಗೆ ಸಿಗುತ್ತದೆ.