ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಗೋಲ್ಡ್ ಸುರೇಶ್ ಆಟವನ್ನು ಚೆನ್ನಾಗಿ ಆಡಿ ಮನೆಯ ಕ್ಯಾಪ್ಟನ್ ಪಟ್ಟ ಪಡೆದುಕೊಂಡಿದ್ದರು. ಆದರೆ ತುರ್ತು ಪರಿಸ್ಥಿತಿಯ ಕಾರಣದಿಂದ ಆಟವನ್ನು ಅರ್ಧಕ್ಕೆ ನಿಲ್ಲಿಸಿ ದೊಡ್ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರ ಬರಲು ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.
ಗೋಲ್ಡ್ ಸುರೇಶ್ ಕಳೆದ ವಾರ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ರು. ಕ್ಯಾಪ್ಟನ್ ಆಗಿ ಗೇಮ್ ಶುರು ಮಾಡುವ ಮುನ್ನವೇ ಗೋಲ್ಡ್ ಸುರೇಶ್ ದೊಡ್ಮನೆಯಿಂದ ಹೊರಗೆ ಹೋಗಿದ್ದಾರೆ. ಸುರೇಶ್ ತಂದೆ ನಿಧನರಾಗಿದ್ದಾರೆ ಹೀಗಾಗಿ ಸುರೇಶ್ ದೊಡ್ಮನೆಯಿಂದ ಹೊರಗೆ ಹೋಗಿದ್ದಾರೆ ಎನ್ನಲಾಗ್ತಿದೆ. ಆದ್ರೆ ಅದು ಸುಳ್ಳು ಸುದ್ದಿ ಆಗಿದ್ದು ಗೋಲ್ಡ್ ಸುರೇಶ್ ತಂದೆ ಆರೋಗ್ಯವಾಗಿದ್ದಾರೆ.
ಗೋಲ್ಡ್ ಸುರೇಶ್ ಅವರು ನಡೆಸುತ್ತಿದ್ದ ಬ್ಯುಸಿನೆಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಏರುಪೇರಾಗಿದ್ದ ಹಿನ್ನೆಲೆ ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾಯ್ತು ಎಂದು ಗೋಲ್ಡ್ ಸುರೇಶ್ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗ್ತಿದೆ. ವ್ಯವಹಾರದಲ್ಲಿ ಭಾರೀ ನಷ್ಟ ಅನುಭವಿಸಿದ ಕಾರಣ ಮನೆಯವರು ಹೊರಗೆ ಕರೆಸುವಂತೆ ಕೇಳಿಕೊಂಡಿದ್ರು ಎನ್ನಲಾಗ್ತಿದೆ. ಹೀಗಾಗಿ ನಾನು ಹೊರಗೆ ಬಂದೆ ಎಂದು ಸುರೇಶ್ ಹೇಳಿದ್ದಾರೆ ಎನ್ನಲಾಗುತ್ತಿದೆ.
ಗೋಲ್ಡ್ ಸುರೇಶ್ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಶ್ರೀಂತರು. ಹೊರಗಡೆ ಸಾವಿರಾರು ಜನರ ಜೊತೆ ಫೈಟ್ ಮಾಡಿ ನಾನು ಗೆದ್ದಿದ್ದೇನೆ, ಒಳಗಡೆ ಹೋಗಿ ನಾನ್ಯಾಕೆ ಗೆಲ್ಲೋಕಗಾಲ್ಲ? ಎಂದು ಯೋಚಿಸಿ ಇವರು ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದರು. ಭರ್ತಿ 2 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಾರವನ್ನು ಸದಾ ಧರಿಸಿಕೊಂಡೇ ಓಡಾಡುವ ಗೋಲ್ಡ್ ಸುರೇಶ್ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವುದು ಸಾಕಷ್ಟು ಜನರಿಗೆ ಬೇಸರ ಮೂಡಿಸಿದೆ.