ನವದೆಹಲಿ: ನಾಳೆ ಅಂದರೆ ಫೆಬ್ರವರಿ 12ರಿಂದ 2023 -24 ನೇ ಸಾಲಿನ ನಾಲ್ಕನೇ ಸರಣಿಯ ಗೋಲ್ಡ್ ಬಾಂಡ್ ಸ್ಕೀಮ್ ಆರಂಭವಾಗಲಿದ್ದು, ಫೆಬ್ರವರಿ 16 ರವರೆಗೆ ಬಾಂಡ್ ಗಳನ್ನು ಖರೀದಿಸಬಹುದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಗೋಲ್ಡ್ ಬಾಂಡ್ ಗಳನ್ನು ನಿರ್ದಿಷ್ಟ ಅಂಚೆ ಕಚೇರಿಗಳು, ವಾಣಿಜ್ಯ ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್, ಕ್ಲಿಯರಿಂಗ್ ಕಾರ್ಪೊರೇಷನ್ ಗಳಲ್ಲಿ ಪಡೆದುಕೊಳ್ಳಬಹುದಾಗಿದೆ.
ಫೆಬ್ರವರಿ 8, 2016ರಲ್ಲಿ ಜಾರಿ ಮಾಡಿದ್ದ ಗೋಲ್ಡ್ ಬಾಂಡ್ ಬೆಲೆ ಪ್ರತಿ ಗ್ರಾಂಗೆ 2600 ರೂ. ನಿಗದಿಪಡಿಸಲಾಗಿತ್ತು. ಎಂಟು ವರ್ಷ ಮೆಚುರಿಟಿ ಅವಧಿ ನಿಗದಿಗೊಳಿಸಲಾಗಿದ್ದು, 2024ರ ಫೆಬ್ರವರಿ 8ರಂದು ಅವಧಿ ಮುಕ್ತಾಯವಾಗಲಿದೆ. ಮೆಚುರಿಟಿ ಮೊತ್ತವನ್ನು ಘೋಷಣೆ ಮಾಡಿದ್ದು, ಪ್ರತಿ ಯುನಿಟ್ 6271 ರೂ. ನಿಗದಿಪಡಿಸಿದೆ. ಗೋಲ್ಡ್ ಬಾಂಡ್ ದಾರರಿಗೆ ಶೇಕಡ 141 ರಷ್ಟು ರಿಟರ್ನ್ಸ್ ಸಿಗಲಿದೆ. ಹೂಡಿಕೆದಾರರಿಗೆ ಮೆಚುರಿಟಿ ಸಮಯದಲ್ಲಿನ ಚಿನ್ನದ ಮಾರುಕಟ್ಟೆ ಮೌಲ್ಯ ಮತ್ತು ಬಡ್ಡಿ ಸಹಿತ ರಿಟರ್ನ್ಸ್ ಸಿಗಲಿದೆ.