ಆನೇಕಲ್:- ವಾಹನಗಳು ಅಪಘಾತವಾಗೋದನ್ನ ನೋಡಿರ್ತೀವಿ.. ಇಲ್ಲಿ ದೇವರ ರಥವೊಂದು ಕೂಡ ಅಪಘಾತಕ್ಕೀಡಾಗಿದೆ..
ಜಾತ್ರೆಗಾಗಿ ಎಳೆದು ತರುತ್ತಿದ್ದ ರಥ ಕಂಟ್ರೋಲ್ ತಪ್ಪಿ ಉರುಳಿಬಿದ್ದ ಘಟನೆ ಆನೇಕಲ್ನ ಹುಸ್ಕೂರು ಬಳಿ ನಡೆದಿದೆ.
ಹುಸ್ಕೂರು ಮದ್ದೂರಮ್ಮ ಜಾತ್ರೆಗೆಂದು ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ ರಥವನ್ನ ಎತ್ತುಗಳು ಹಾಗೂ ಟ್ರಾಕ್ಟರ್ ಸಹಾಯದಿಂದ ಎಳೆದು ತರಲಾಗುತ್ತಿತ್ತು.
ಈ ವೇಳೆ ಕಮ್ಮಸಂದ್ರದ ಹೈಪರ್ ಮಾರ್ಕೆಟ್ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. 120 ಅಡಿ ಎತ್ತರದ ಈ ಬೃಹತ್ ತೇರು ಉರುಳಿ ಬೀಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.