ಭಾರತ ದೇಶದಲ್ಲೇ ಇರುವ ದೇವಾಲಯಗಳು ಯಾವ ದೇಶದಲ್ಲೂ ನೋಡಲು ಸಿಗುವುದಿಲ್ಲ. ಯಾವ ಊರಲ್ಲಿ ದೇವಾಲಯ ಇಲ್ಲವೋ ಮತ್ತು ಯಾರ ಹಣೆಯ ಮೇಲೆ ವಿಭೂತಿ ಇಲ್ಲವೋ ಅವರಿಗೆ ದಿಕ್ಕಾರ ಅಂತ ವೇದಾಂತ ಹೇಳುತ್ತದೆ. ರಬಕವಿ ನಗರದಲ್ಲಿ ಬಹಳಷ್ಟು ದೇವಾಲಯಗಳು ಇವೆ ಮತ್ತು ವಿಭೂತಿ ಮತ್ತು ದೇವರನ್ನು ಗೌರವಿಸುತ್ತಾ ಬಂದಿರುವುದು ನಮಗೆ ಬಹಳ ಸಂತೋಷವೆನಿಸುತ್ತದೆ.
ಶ್ರೀ ದಾನಮ್ಮ ದೇವಿಗೆ ತೇರು ಒಂದು ಅವಶ್ಯಕತೆ ಇತ್ತು ಇಂದು ನೀವೆಲ್ಲರೂ ಸೇರಿ ಆ ತೇರನ್ನು ನಿರ್ಮಾಣ ಮಾಡಿದ್ದೀರಿ ಅದು ಕಟ್ಟಿಗೆಯ ತೇರಾಗಿದೆ ಮುಂದಿನ ದಿನಮಾನಗಳಲ್ಲಿ ನೀವೆಲ್ಲರೂ ಸೇರಿ ಬೆಳ್ಳಿಯ ತೇರನ್ನು ನಿರ್ಮಾಣ ಮಾಡುತ್ತೀರೆಂದು ಆತ್ಮವಿಶ್ವಾಸ ನನಗಿದೆ ಎಂದು ಶ್ರೀಮದ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಶೈಲಂ ಆಶೀರ್ವಾದ ನೀಡಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ದಾನಮ್ಮ ದೇವಿ ದೇವಸ್ಥಾನದ ನೂತನ ರಥ ಡಿಸೆಂಬರ್ 26 ರಂದು ಗುರುವಾರ ಸಾಯಂಕಾಲ ೮.೦೦ ಶ್ರೀಮದ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಶೈಲಂ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.
ಹೋಟೆಲ್ ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಪ್ರಿಯತಮೆ..! ಮುಂದೇನಾಯ್ತು..?
ಇದೇ ಸಂದರ್ಭದಲ್ಲಿ ದಿವ್ಯಸಾಾನಿಧ್ಯ ವಹಿಸಿದ ಶ್ರೀ ೧೦೦೮ ಶ್ರೀಮದ ಜಗದ್ಗುರು ಶ್ರೀಶೈಲ ಸೂರ್ಯ ಸಿಂಹಾಸನಾಧೀಶ್ವ ನೀಲಕಂಠ ಪಟ್ಟಾಧ್ಯಕ್ಷರು ಶ್ರೀ ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಶ್ರೀ ಶ್ರೀ ವಿರಕ್ಷಾವರ್ತಿ ಮಠ ಹಳೆ ಹುಬ್ಬಳ್ಳಿ.ಶ್ರೀ ಷ ಬ್ರ ಶರಣಬಸವ ಶಿವಾಚಾರ್ಯರು ಶ್ರೀ ಹಿರೇಮಠ ಬನಹಟ್ಟಿ. ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮ ರಬಕವಿ. ರಥದ ಧಾನಿಗಳು:: ಶ್ರೀ ಮಲ್ಲೇಶಪ್ಪಾ ಕುಚನೂರು.
ಅತಿಥಿಗಳಾಗಿ: ಸಿದ್ದು ಸವದಿ ಶಾಸಕರು ತೇರದಾಳ ಮತಕ್ಷೇತ್ರ. ಮಹಾಂತೇಶ ಬೀಳಗಿ ಐಎಎಸ್ ಎಂ ಡಿ ಬೆಸ್ಕಾಂ ಬೆಂಗಳೂರು. ವಿಜುಗೌಡ ಪಾಟೀಲ ಅಧ್ಯಕ್ಷರು ಶ್ರೀ ದಾನಮ್ಮದೇವಿ ಟ್ರಸ್ಟ್ ಗುಡ್ಡಾಪುರ. ವಿಠ್ಠಲ ಪೂಜಾರಿ ಕಾರ್ಯದರ್ಶಿ ಶ್ರೀ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಗುಡ್ಡಾಪುರ.
ಶಂಕರ ಗಣಮುಖಿ ವಕೀಲರು. ಸಿದ್ದು ಕೊಣ್ಣೂರ. ಧರೆಪ್ಪ ಉಳ್ಳಾಗಡ್ಡಿ. ಎಂ ಬಿ ನಾಶಿ ಶ್ರೀ ಧಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಸಮಿತಿ ರಬಕವಿ ಅಧ್ಯಕ್ಷರಾದ ಶಿವಜಾತ ಉಮದಿ ಮಹಾದೇವ ಧುಪದಾಳ ಚೇರ್ಮಣ್ಣರು ರಥ ಕಮಿಟಿ ಶ್ರೀ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಸಮಿತಿ ರಬಕವಿ. ನಿರ್ದೇಶಕರಾದ ನಾರಾಯಣ ಬೋರಗಿನಾಯಕ. ಸಂಜಯ ತೇಲಿ. ಪ್ರೊ ಶಿವಾನಂದ ದಾಶಾಳ. ರಾಜು ಉಮದಿ. ವಿಜಯಕುಮಾರ ಹಲಕುರ್ಕಿ. ಸೇರಿದಂತೆ ರಬಕವಿ ಬನಹಟ್ಟಿ ರಾಂಪುರ್ ಹೊಸೂರ್ ಸೇರಿದಂತೆ ವಿವಿಧ ನಗರಗಳಿಂದ ಭಕ್ತರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ