ಗದಗ:- ಅಬಕಾರಿ ಪೊಲೀಸರ ಕಾರ್ಯಾಚರಣೆಯಿಂದ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ ಗೋವಾ ಮದ್ಯ ವಶಕ್ಕೆ ಪಡೆಯಲಾಗಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿ ಕ್ರಾಸ್ ಬಳಿ ಘಟನೆ ಜರುಗಿದೆ
ಬೈಕ್ ನಲ್ಲಿ ಸಾಗಿಸೋವಾಗ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದಿದು, ಗೋವಾ ಮದ್ಯ ಸೇರಿ ಒಟ್ಟು 6.69 ಲೀ ಮದ್ಯ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ದಾಳಿ ವೇಳೆ ಮದ್ಯ ಸಾಗಿಸ್ತಿದ್ದ ವ್ಯಕ್ತಿ ಪರಾರಿ ಆಗಿದ್ದು, ಅಕ್ರಮ ಮದ್ಯ ಸಾಗಾಟ ಕುರಿತು ಪ್ರಕರಣ ದಾಖಲಾಗಿದೆ. ಅಬಕಾರಿ ಉಪ ಆಯುಕ್ತೆ ಲಕ್ಷಿ ಹಾಗೂ ಅಬಕಾರಿ ಉಪ ಅಧೀಕ್ಷಕ ಎ ಬಿ ಮಠಪತಿ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ ಶಿರಹಟ್ಟಿ ವಲಯ ನಿರೀಕ್ಷಕ ಸಂತೋಷ್ ರಡ್ಡೆರ್, ಸಿಬ್ಬಂದಿಗಳಾದ ಗಿರೀಶ್ ಮುದರೆಡ್ಡಿ, ನಿಂಗಪ್ಪ, ನದಾಫ್, ಸಂತೋಷ್ ಭಾಗಿಯಾಗಿದರು.