ಉಡುಪಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕರ್ನಾಟ ಪ್ರವಾಸಕೈಗೊಂಡಿದ್ದು, ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದಿದ್ದಾರೆ. ಒಂದು ದಿನದ ಮಟ್ಟಿಗೆ ಉಡುಪಿಗೆ ಭೇಟಿ ನೀಡಿದ್ದ ಪ್ರಮೋದ್, ಅವರು ಕೊಲ್ಲರಿನ ಮೂಕಾಂಬಿಕೆ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇನ್ನೂ ವಿಶೇಷವೆಂದರೆ ಹೆಲಿಕಾಫ್ಟರ್ ಬಿಟ್ಟು, ರೈಲಿನ ಮೂಲಕ ಬೈಂದೂರಿಗೆ ಬಂದಿಳಿದ್ದರು. ಈ ವೇಳೆ ಶಾಸಕ ಗುರುರಾಜ್ ಗಂಟಿಹಹೊಳೆ ಸಾವಂತ್ ಅವರನ್ನು ಸ್ವಾಗತಿಸಿದರು. ಮುಕಾಂಬಿಕೆಯ ದರ್ಶನದ ಬಳಿಕ ಚಂಡಿಕಾ ಹೋಮದಲ್ಲಿ ಭಾಗಿಯಾದರು. ವಿಶೇಷ ಪೂಜೆ ನೆರವೇರಿಸಿ ಇತರೆ ಎರಡು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗೋವಾಕ್ಕೆ ವಾಪಸ್ ಆಗಿದ್ದಾರೆ.