ಕನ್ನಡದ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನೂ ಕೆಲವೇ ವಾರಗಳು ಮಾತ್ರವೇ ಭಾಕಿ ಇದೆ. ಟಾಪ್ ಐದು ಸ್ಪರ್ಧಿಗಳು ಯಾರು ಎಂದು ಊಹಿಸುವುದು ಕಷ್ಟವಾಗಿದೆ. ಇದೇ ಹೊತ್ತಿಲ್ಲಿ 13 ವಾರಗಳ ಕಾಲ ಟಫ್ ಸ್ಪರ್ಧೆ ನೀಡಿದ್ದ ನಟಿ ಐಶ್ವರ್ಯಾ ಸಿಂಧೋಗಿ ಬಿಗ್ಬಾಸ್ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಹೊರ ಬಂದಿದ್ದಾರೆ.
ಬಿಗ್ಬಾಸ್ ಮನೆಯಿಂದ ಅಳುತ್ತಲೇ ಆಚೆ ಬಂದ ಐಶ್ವರ್ಯಾ ಸಿಂಧೋಗಿಗೆ ಬಿಗ್ಬಾಸ್ ವಿಶೇಷ ಬೀಳ್ಕೊಡುಗೆ ಕೊಟ್ಟಿದ್ದಾರೆ. ತಂದೆ-ತಾಯಿ ಇಲ್ಲದ ಹುಡುಗಿ ಎಂಬ ಕಾರಣಕ್ಕೆ ಐಶ್ವರ್ಯಾ ಅವರು ಆಗಾಗ ಕುಗ್ಗುತ್ತಿದ್ದರು. ಅಂಥ ಎಲ್ಲ ಸಂದರ್ಭಗಳಲ್ಲಿ ಬಿಗ್ ಬಾಸ್ ಕಡೆಯಿಂದ ಐಶ್ವರ್ಯಾಗೆ ಪ್ರೀತಿಯ ಸಂದೇಶ ಬಂದಿತ್ತು. ಇದೀಗ ಮನೆಯಿಂದ ಹೊರ ಹೋಗುವಾಗಲು ಬಿಗ್ ಬಾಸ್ ಪ್ರೀತಿಗೆ ವಿದಾಯ ನೀಡಿದೆ. ಪ್ರೀತಿಯ ಐಶ್ವರ್ಯಾ 13 ವಾರಗಳ ಕಾಲ ಬಿಗ್ಬಾಸ್ ಮನೆಯ ಸ್ಪರ್ಧಿಯಾಗಿ ಈ ಮನೆಯಲ್ಲಿ ಜೀವಿಸಿರುವುದು ಸಂತೋಷದ ವಿಷಯ. ತುಸು ಬೇಸರವಿದ್ದರೂ, ನಗು, ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಎಲ್ಲ ಭಾವನೆಗಳಿಗೆ ಸಾಕ್ಷಿಯಾದ ಮನೆಯಿಂದ ಕಳಿಸಿಕೊಡುವುದು ಬೇಕಾಗಿದೆ ಅಂತ ಪ್ರತದಲ್ಲಿ ಬರೆಯಲಾಗಿತ್ತು.
ಬಿಗ್ಬಾಸ್ ಮನೆಯಿಂದ ಆಚೆ ಹೋಗುತ್ತಿದ್ದ ಐಶ್ವರ್ಯಾಗೆ ಬಿಗ್ಬಾಸ್ ಕೊನೆಯದಾಗಿ ಈ ಮಾತನ್ನು ಹೇಳಿ ಕಳುಹಿಸಿ ಕೊಟ್ಟಿದ್ದಾರೆ. ಜೀವನದ ಪಯಣದಲ್ಲಿ ಒಂದು ದ್ವಾರ ಮುಚ್ಚಿಕೊಂಡರೇ ಮತ್ತೊಂದು ತೆರೆದುಕೊಳ್ಳುತ್ತದೆ. ಕೆಲವನ್ನು ದಾಟಿ ಬದುಕು ಕಟ್ಟಿಕೊಳ್ಳುತ್ತೇವೆ. ಮತ್ತೆ ಕೆಲವನ್ನು ದಾಟಿ ಅನುಭವ ಕಟ್ಟಿಕೊಳ್ಳುತ್ತದೆ. ಐಶ್ವರ್ಯಾ ಈ ಮನೆಯಲ್ಲಿನ ಆಟ ಇಂದಿಗೆ ಮುಗಿದಿರಬಹುದು. ಆದ್ರೆ, ಈ ದ್ವಾರ ತೆರೆದುಕೊಳ್ಳುವುದು ಆಟದಿಂದ ಹೊರ ಕಳುಹಿಸಲ್ಪಟ್ಟ ಐಶ್ವರ್ಯಾಗೆ ಅಲ್ಲ. ತನ್ನ ತವರಿಂದ ಹೊರಟು ಹೊಸ ಜೀವನದತ್ತ ಹೆಜ್ಜೆ ಇಡುತ್ತಿರುವ ಈ ಮನೆಯ ಮಗಳು ಐಶ್ವರ್ಯಾಗೆ. ಐಶ್ವರ್ಯಾ ಹೋಗಿ ಬಾ ಮಗಳೇ ಅಂತ ಹೇಳಿದ್ದಾರೆ. ಬಿಗ್ಬಾಸ್ ಮಾತು ಕೇಳುತ್ತಿದ್ದಂತೆ ಐಶ್ವರ್ಯಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಜೊತೆಗೆ ಬಿಗ್ಬಾಸ್ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ವೇದಿಕೆಗೆ ಬಂದು ಸುದೀಪ್ ಜೊತೆ ಐಶ್ವರ್ಯಾ ಮಾತನಾಡಿದರು. ‘ಆರಂಭದಲ್ಲಿ ಇದ್ದ ಎನರ್ಜಿ ಕಡಿಮೆ ಆಯಿತು. ಅದೇ ತಪ್ಪಾಯಿತು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದು ನನ್ನ ಮನೆಯೇ ಅನಿಸಿತು. ನನಗೆ ಒಂದು ಫ್ಯಾಮಿಲಿ ಸಿಕ್ಕಿದೆ. 3 ತಿಂಗಳು ನಾನು ಬಿಗ್ ಬಾಸ್ ಮನೆಯಲ್ಲಿ ಬದುಕಿದ್ದಕ್ಕೆ ನನಗೆ ಸಾರ್ಥಕ ಎನಿಸಿದೆ. ಬಿಗ್ ಬಾಸ್ ಮನೆ ನನಗೆ ದೇವಸ್ಥಾನ. ಅದರಲ್ಲಿ ಸುದೀಪ್ ಅವರು ದೇವರ ರೀತಿ. ನನ್ನನ್ನು ಇಷ್ಟಪಡುವ ಕರ್ನಾಟಕದ ಜನತೆಗೆ ಧನ್ಯವಾದ. ಯಾರೂ ಇಲ್ಲ ಎಂಬ ಫೀಲಿಂಗ್ ಬಂದಿಲ್ಲ. ಇನ್ಮುಂದೆ ಬರುವುದೂ ಇಲ್ಲ’ ಎಂದು ಐಶ್ವರ್ಯಾ ಅವರು ಹೇಳಿದರು.
‘ನಿಮ್ಮ ಜೊತೆ ಒಂದು ಸಿನಿಮಾ ಮಾಡಬೇಕು. ಯಾವ ಪಾತ್ರವಾದರೂ ಪರವಾಗಿಲ್ಲ’ ಎಂದು ಐಶ್ವರ್ಯಾ ಅವರು ಸುದೀಪ್ ಎದುರು ತಮ್ಮ ಆಸೆಯನ್ನು ಹೇಳಿಕೊಂಡರು.