ಬೆಂಗಳೂರು: ವಿಧಾನಸೌಧದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಈ ವೇಳೆ ಪರಿಸರ ಸಚಿವ ಈಶ್ವರ ಖಂಡ್ರೆ ಕೂಡ ಉಪಸ್ಥಿತರಿದ್ದರು.
25 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಯಾರ್ಯಾರು ಎಲ್ಲೆಲ್ಲಿಗೆ ಇಲ್ಲಿದೆ ನೋಡಿ
ಆ ನಂತರ ಮಾತನಾಡಿದ ಅವರು, ಜನಸ್ಪಂದನ ಕಾರ್ಯಕ್ರಮಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಜನತಾ ದರ್ಶನ ಪುನರಾರಂಭ ವಿಚಾರ ಮಾಡಲಿ ತಪ್ಪೇನಿದೆ? ಜನರ ಮಧ್ಯೆ ಹೋಗಿ, ಜನರ ಸಮಸ್ಯೆ ಬಗೆಹರಿಸಿದ್ರೆ ಒಳ್ಳೆಯದಲ್ವ? ರಾಜಕಾರಣಿಗಳು ಇರೋದೇ ಜನರ ಸೇವೆ ಮಾಡಲು, ಮಾಡಲಿ ನಮ್ಮ ಅಭ್ಯಂತರ ಇಲ್ಲ ಎಂದರು.
ಹಾಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಡಿಕೆ ಬ್ರದರ್ಸ್ ಗೆ ಕುಮಾರಸ್ವಾಮಿ ಟಕ್ಕರ್ ನೀಡುವ ವಿಚಾರ ಬಗ್ಗೆ ಮಾತನಾಡಿ ಏನು ಬೇಕಾದರೂ ಮಾಡಲಿ ಒಮ್ಮೆ ಟಕ್ಕರ್ ಕೊಡ್ತಾರೆ, ಒಮ್ಮೆ ಬಿಟ್ಟು ಬಿಡ್ತಾರೆ ಎಂದು ಡಿಕೆಶಿ ಮಾರ್ಮಿಕವಾಗಿ ನುಡಿದರು.