ಬೆಂಗಳೂರು: ನಗರದಲ್ಲಿ ರಸ್ತೆಬದಿ ನಿಲ್ಲಿಸಿದ್ದ 25ಕ್ಕೂ ಹೆಚ್ಚು ವಾಹನಗಳ ಗಾಜು ಒಡೆದು ಹಾಕಲಾಗಿದ್ದು, ಕೃತ್ಯ ಎಸಗಿದ್ದ ಮೂವರು ಕಿಡಿಗೇಡಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಜೀವ್ ಗಾಂಧಿನಗರದ ರಸ್ತೆಗಳಲ್ಲಿ ಕಾರು, ದ್ವಿಚಕ್ರ ವಾಹನ ಹಾಗೂ ಆಟೊಗಳನ್ನು ನಿಲ್ಲಿಸಲಾಗಿತ್ತು. ಮಾಸ್ಕ್ ಧರಿಸಿದ್ದ ಮೂವರು ಕಿಡಿಗೇಡಿಗಳು, ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಲಾಂಗ್ನಿಂದ ವಾಹನಗಳ ಗಾಜು ಒಡೆದು ಪರಾರಿಯಾಗಿದ್ದಾರೆ’ ಎಂದು ಸ್ಥಳೀಯರು ಹೇಳಿದರು.
‘ಆರೋಪಿಗಳ ಕೃತ್ಯದಿಂದಾಗಿ 20ಕ್ಕೂ ಹೆಚ್ಚು ಕಾರುಗಳು, 5 ದ್ವಿಚಕ್ರ ವಾಹನಗಳು ಹಾಗೂ ಆಟೊ ಜಖಂಗೊಂಡಿವೆ. ಕಿಡಿಗೇಡಿಗಳನ್ನು ಪತ್ತೆ ಮಾಡಿ, ಕಠಿಣ ಕ್ರಮ ಜರುಗಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.