ಹುಬ್ಬಳ್ಳಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚೆಳಿಗಾಲ ಅಧಿವೇಶನದಲ್ಲಿ ಭಾಗಿಯಾಗಿ ಬರಗಾಲದ ಕುರಿತು ಮಾತನಾಡಿದ ಕುಂದಗೋಳ ಕ್ಷೇತ್ರದ ಶಾಸಕ ಎಮ್.ಆರ್.ಪಾಟೀಲ್ ರೈತರ ಸಮಸ್ಯೆಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಂಡು ಕಾಣದಂತ ಬರಗಾಲ ಈ ವರ್ಷ ಬಂದಿದೆ. ರೈತರು ತಮ್ಮ ಜಾನುವಾರುಗಳನ್ನ ಸಾಕುವುದು ಕಷ್ಟಕರವಾಗಿದೆ. ಇಂತಹ ಸಮಯದಲ್ಲಿ ಸರ್ಕಾರ ಮೇವು ಬ್ಯಾಂಕ್ಗಳನ್ನ ಓಪನ್ ಮಾಡಬೇಕಾಗಿತ್ರು.
ಇಲ್ಲಿಯವರೆಗೂ ಸರ್ಕಾರ ಮೇವು ಬ್ಯಾಂಕ್ ಓಪನ್ ಮಾಡಿಲ್ಲ. ಇದರಿಂದಾಗಿ ರೈತ ಸಮುದಾಯ ಸಂಕಷ್ಟದಲ್ಲಿ ಸಿಲುಕೊಂಡಿದ್ದಾನೆ. ತಕ್ಷಣ ಮೇವು ಬ್ಯಾಂಕ್ಗಳನ್ನ ಓಪನ್ ಮಾಡಿ, ಉಚಿತವಾಗಿ ಮೇವು ಗಳನ್ನ ನೀಡಬೇಕು. ಅಲ್ಲದೇ ಕುಂದಗೋಳ ಮತ ಕ್ಷೇತ್ರದಲ್ಲಿ ಎರಡೂ ತಿಂಗಳ ಅವಧಿಯಲ್ಲಿ ನಾಲ್ಕು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಕ್ಷೇತ್ರ ಒಣ ಬೇಸಾಯದಿಂದ ಕೂಡಿದೆ. ಮಳೆ ಆಧಾರಿತ ವ್ಯವಸಾಯ ಮಾಡಬೇಕಿದೆ. ಕೆಲವು ಕಡೆ ಬೋರ್ವೇಲ್ಗಳಿದ್ದರು ಅದಕ್ಕೆ ಸರಿಯಾದ ವಿದ್ಯುತ್ ಕೊಡಲು ಸರ್ಕಾರದಿಂದ ಆಗುತ್ತಿಲ್ಲ. ಇಂತಹ ಸಮಯದಲ್ಲಿ ರಾತ್ರಿ ವೇಳೆ ತ್ರೀಪೇಸ್ ವಿದ್ಯುತ್ ನೀಡಲಾಗುತ್ತಿದೆ.
ಇದರಿಂದಾಗಿ ರೈತರಿಗೆ ಹಾವು ಕಡಿದು ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿವೆ. ಆದ್ದರಿಂದ ಸರ್ಕಾರ ತ್ರೀಪೇಸ್ ವಿದ್ಯುತನ್ನ ಹಗಲು ಕೊಡಲು ಅಧಿಕಾರಿಗಳಿಗೆ ಸೂಚಿಸಬೇಕು. ಧಾರವಾಡ ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಕುಡಿಯುವ ನೀರಿಗಾಗಿ ಯಾವುದೇ ಅನುದಾನವನ್ನ ಸರ್ಕಾರ ಇಟ್ಟಿಲ್ಲ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಟಾಸ್ಕ್ಪೋರ್ಸ್ನಲ್ಲಿ ಒಂದು ಕೋಟಿ ರೂಪಾಯಿ ಕೊಡಬೇಕು.
ಕಿಸಾನ್ ಸನ್ಮಾನ್ ಯೋಜನೆಯಲ್ಲಿ ರೈತನಿಗೆ ಪ್ರತಿ ವರ್ಷ ನಾಲ್ಕು ಸಾವಿರ ರೂಪಾಯಿ ರೈತನ ಖಾತೆಗೆ ಜಮಾ ಆಗುತ್ತಿತ್ತು, ಈಗ ಅದು ನಿಂತು ಹೋಗಿದೆ. ಹಿಂದೆ ಅತಿವೃಷ್ಟಿ ಆದಗ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಪ್ ನಲ್ಲಿ ಕಳೆದ ವರ್ಷ ಪರಿಹಾರ ನೀಡಿದಂತೆ, ಈ ವರ್ಷವೂ ಪರಿಹಾರ ನೀಡಬೇಕು. ರೈತ ಪ್ರತಿ ಎಕರೆ 25-30 ಸಾವಿರ ಖರ್ಚು ಮಾಡಿದ್ದಾರೆ. ಅದರಲ್ಲಿ ಒಂದು ಸಾವಿರ ರೈತನಿಗೆ ಬರದಂತ ಸ್ಥಿತಿ ಇದೆ. ಆದ್ದರಿಂದ ಸರ್ಕಾರ ಆದಷ್ಟು ಬೇಗನೆ ಪರಿಹಾರ ನೀಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಿದ ಶಾಸಕ ಎಮ್.ಆರ್.ಪಾಟೀಲ್..