ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಪೋಸ್ಟರ್ ವಾರ್ ಮುಂದುವರಿದಿದೆ. ಇಂದು ಕೂಡ ಕರ್ನಾಟಕ ಬಿಜೆಪಿ ಮತ್ತೊಂದು ಪೋಸ್ಟರ್ ಬಿಟ್ಟಿದ್ದು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.
https://x.com/BJP4Karnataka/status/1727176137619722356?s=20
‘ಕಲೆಕ್ಷನ್ ಕೊಡಿ, ನಿಗಮ ಮಂಡಳಿ ಅಧಿಕಾರ ಪಡೆಯಿರಿ’ ಎಂಬ ತಲೆ ಬರಹ ಇರುವ ಫೋಟೋಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವ ಚಿತ್ರವನ್ನು ಅಂಟಿಸಿದೆ. ಜೊತೆಗೆ ಬಿಡಿಎಗೆ 50 ಕೋಟಿ ರೂಪಾಯಿ, ಕರ್ನಾಟಕ ಗೃಹ ಮಂಡಳಿಗೆ 10 ಕೋಟಿ, ಬಿಡಬ್ಲ್ಯೂಎಸ್ಎಸ್ಬಿ 45 ಕೋಟಿ ಸೇರಿದಂತೆ ವಿವಿಧ ನಿಗಮಗಳಲ್ಲಿ ಅಧ್ಯಕ್ಷರಾಗಲು ಕಾಂಗ್ರೆಸ್ನಲ್ಲಿ ಕೋಟಿ ಕೋಟಿ ರೂಪಾಯಿ ಹಣವನ್ನು ನಿಗಧಿ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಈಗಾಗಲೇ ವರ್ಗಾವಣೆಯನ್ನು ಫೋನ್ ಕರೆಯಲ್ಲೇ ನಿಭಾಯಿಸುವ ವ್ಯವಸ್ಥಿತ ದಂಧೆಯನ್ನಾಗಿ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರ ಸರ್ಕಾರ, ನಿಗಮ ಮಂಡಳಿ ಹರಾಜಿಗೆ ಇಷ್ಟು ದಿನ ಕಾಯುತ್ತಿತ್ತು.
ಈ ಹಿಂದೆ ವ್ಯವಹಾರ ಸರಿಯಾಗಿ ಕುದುರದ ಕಾರಣ ಮುಂದೂಡಲಾಗಿದ್ದ ನಿಗಮ ಮಂಡಳಿ ಹುದ್ದೆಗಳ ಹರಾಜು ಪ್ರಕ್ರಿಯೆ ಬಗ್ಗೆ ಸುರ್ಜೇವಾಲ ದೆಹಲಿಯಿಂದ ಬಂದು ಸಮಾಲೋಚನೆಗಳನ್ನು ನಡೆಸಿದ್ದಾರೆ. ಪರಿಣಾಮವಾಗಿ ನಿಗಮ ಮಂಡಳಿ ಹುದ್ದೆಗೆ ಕೊಡಬೇಕಾದ ಕಲೆಕ್ಷನ್ ಪ್ರಮಾಣ ಮತ್ತೆ ಚರ್ಚೆಗೆ ಬಂದಿದೆ ಎಂದು ಟ್ವೀಟ್ ಮಾಡಿದೆ