ಬೆಳಗಾವಿ: ಕಳೆದೊಂದು ತಿಂಗಳಿನಿಂದ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯದ ಪ್ರಕರಣಗಳು ಒಂದೊಂದಾಗಿ ಬಯಲಿಗೆ ಬರುತ್ತಲೇ ಇದೆ. ಅದೇ ರೀತಿ ಈಗ ಮತ್ತೊಂದು ವಿಚಾರ ಬಯಲಿಗೆ ಬಂದಿದೆ. ಡೈವೋರ್ಸ್ ಕೊಡು ಇಲ್ಲವಾದ್ರೆ ಅಶ್ಲೀಲ ವಿಡಿಯೋ ವೈರಲ್ ಮಾಡ್ತಿನಿ ಎಂದು ಹೆಂಡತಿಯನ್ನು ಬ್ಲಾಕ್ ಮೇಲ್ ಮಾಡಿದ ಪತಿಯನ್ನು ಅರೆಸ್ಟ್ ಮಾಡಲಾಗಿದೆ.
ಈ ಹಿಂದೆ ಹೆಂಡತಿ ಜೊತೆ ಕಳೆದಿದ್ದ ಏಕಾಂತದ ಸಂದರ್ಭದಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ತೆಗೆದುಕೊಂಡಿದ್ದ. ಇದೀಗ ಅದೇ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡೋದಾಗಿ ಬೆದರಿಸುತ್ತಿದ. ಡಿವೋರ್ಸ್ ನೀಡಿದರೆ ಏನೂ ಮಾಡಲ್ಲ. ಕೂಡಲೇ ಡಿವೋರ್ಸ್ ಕೊಡು ಇಲ್ಲದಿದ್ದರೆ ನಿನ್ನ ನಗ್ನ ವಿಡಿಯೋಗಳನ್ನು ವೈರಲ್ ಮಾಡ್ತೀನಿ ಎಂದು ಹೆದರಿಸುತ್ತಿದ್ದನು.
ಗಂಡನ ಬ್ಲ್ಯಾಕ್ಮೇಲ್ಗೆ ಗಾಬರಿಯಾಗಿದ್ದ ಸಂತ್ರಸ್ತೆ ಸಾಕಷ್ಟು ಬಾರಿ ಮನವಲಿಸಲು ಯತ್ನಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ಅನಿವಾರ್ಯವಾಗಿ ಸಂತ್ರಸ್ತೆ ಜಿಲ್ಲಾ ಸೈಬರ್ ಠಾಣೆಯಲ್ಲಿ ಕೇಸ್ ದಾಖಲಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಳು. ಕಿರಣ್ ಬಂಧಿಸಲು ಪೊಲೀಸರು ಬಂದಾಗ ಆತ್ಮಹತ್ಯೆ ಹೈಡ್ರಾಮಾ ಮಾಡಿದ್ದಾನೆ. ಆಸ್ಪತ್ರೆಗೆ ಸೇರಿಸಿ ಟ್ರೀಟ್ಮೆಂಟ್ ಮಾಡಿಸಿ ನಿನ್ನೆ ಕಿರಣ್ʼ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಬೆಳಗಾವಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.