ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಯಾವಾಗ ಯಾವ ರೂಪದಲ್ಲಿ ಕಳ್ಳರು ಬರುತ್ತಾರೆ ಅಂತಾನೇ ತಿಳಿಯುವುದಿಲ್ಲ. ಇಲ್ಲೊಬ್ಬ ನಗರದಲ್ಲಿರುವ ಪಿಜಿಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿರುವ ಕಿರಾತಕ ಹಾಗಾಗಿ ಪಿಜಿಯಲ್ಲಿರುವ ಹುಡುಗಿಯರೇ ಹುಷಾರ್.
ಈ ಐನಾತಿಯ ಟಾರ್ಗೆಟ್ ಅಂದ್ರೆ ಅದು ಪಿಜಿಗಳು ನಗರದ ಪಿಜಿ ಗಳಿಗೆ ಎಂಟ್ರಿ ಕೊಟ್ಟು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ದೋಚೋದು ಇವನ ಕೆಲಸವಾಗಿದೆ.
ಇತ್ತೀಚೆಗೆ ಆಡುಗೋಡಿ ಬಳಿಯ ಪಿಜಿಯೊಂದರಲ್ಲಿ ನುಗ್ಗಿ ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದು ಹಾಗೆ ಒಂದೇ ಗಂಟೆಯಲ್ಲಿ ಮೂರು ಲ್ಯಾಪ್ ಟಾಪ್ ಕದ್ದ ಖದೀಮ
ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಲಕ್ಷಾಂತರ ಬೆಲೆ ಬಾಳುವ ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದಾನೆ.
ಈ ಬಗ್ಗೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.