ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಆರೋಗ್ಯಕರ ಆಹಾರವನ್ನು ಸೇವಿಸಬೇಕು.ಮುಟ್ಟಿನ ಸಮಯದಲ್ಲಿ ಮೆಗ್ನೀಸಿಯಮ್ ಭರಿತ ಆಹಾರಗಳಾದ ಪಾಲಕ್ ಸೊಪ್ಪು ಮತ್ತು ಬಾದಾಮಿ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮುಟ್ಟಿನ ಸಮಯದಲ್ಲಿ ನೋವನ್ನು ಕಡಿಮೆ ಮಾಡಲು ದೇಹವನ್ನು ತೇವಾಂಶದಿಂದಿರಿಸುವುದು ಅತ್ಯಗತ್ಯ. ಆದ್ದರಿಂದ, ಮುಟ್ಟಿನ ಸಮಯದಲ್ಲಿ ಸಾಕಷ್ಟು ನೀರು ಕುಡಿಯಬೇಕು. ಇದಲ್ಲದೇ ಬಾಳೆಹಣ್ಣುಗಳು ಸಾಮಾನ್ಯವಾಗಿ ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿವೆ, ಇದು ಮುಟ್ಟಿನ ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಅಧಿಕವಾಗಿದ್ದು ಸ್ನಾಯು ಸೆಳೆತದಂತಹ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮುಟ್ಟಿನ ಸಮಯದಲ್ಲಿ ನಮ್ಮ ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂ ಬೇಕಾಗುವುದರಿಂದ ಕಡಿಮೆ ಕೊಬ್ಬಿನ ಮೊಸರು ತಿನ್ನುವುದು ಉತ್ತಮ. ಮೊಸರು ಹೊಟ್ಟೆಯ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.ಪ್ರತಿ ತಿಂಗಳು, ಮುಟ್ಟಿನ ಸಮಯದಲ್ಲಿ, ರಕ್ತಸ್ರಾವವು ಅಧಿಕವಾಗಿರುತ್ತದೆ ಮತ್ತು ದೇಹದಲ್ಲಿ ಕಬ್ಬಿಣಾಂಶವು ಖಾಲಿಯಾಗುತ್ತದೆ. ಇದರಿಂದ ಮಹಿಳೆಯರು ಹೆಚ್ಚು ಸುಸ್ತು ಅನುಭವಿಸುತ್ತಾರೆ