ಬೆಂಗಳೂರು :- ಹೆಣ್ಮಕ್ಕಳೇ ಚೀಪ್ ಕಾಸ್ಮೆಟಿಕ್ ಬಳಸೋ ಮುನ್ನ ಎಚ್ಚರದಿಂದಿರಿ. ಸದ್ದಿಲ್ಲದೆ ಕ್ಯಾನ್ಸರ್ ಬರಬಹುದು ಹುಷಾರ್.
ಮನೆ ಬಳಿ ವಾಮಾಚಾರ: ಬೆಲ್ಲ, ನಿಂಬೆಹಣ್ಣು ಇದ್ದ ಪೊಟ್ಟಣ ನೋಡಿ ಭಯಭೀತರಾದ ಕುಟುಂಬಸ್ಥರು!
ಸಿಲಿಕಾನ್ ಸಿಟಿಯ ಬೀದಿ ಬೀದಿಯಲ್ಲಿ ಕ್ಯಾನ್ಸರ್ ಮಾರಾಟ ಮಾಡಲಾಗುತ್ತಿದೆ. ಅಯ್ಯೋ ಇದೇನು ಕ್ಯಾನ್ಸರ್ ಅಂತ ಹೇಳ್ತಿದ್ದಾರೆ ಅಂತ ಕನ್ಪ್ಯೂಸ್ ಆಗ್ಬೇಡಿ. ವಿಷಯ ತಿಳಿಯಲು ಸ್ಟೋರಿ ಕಂಪ್ಲೀಟಾಗಿ ಓದಿ. ಹೆಣ್ಣುಮಕ್ಳೆ ಚೀಪ್ ಕಾಸ್ಮೆಟಿಕ್ ಬಳಸೋ ಮುನ್ನ ಎಚ್ಚರವಾಗಿರಿ. ಸ್ವಲ್ಪ ಯಾಮಾರಿದ್ರು ಚರ್ಮ ಕ್ಯಾನ್ಸರ್ ಬರೋದು ಪಕ್ಕವಾಗಿದೆ. ಸ್ಟ್ರೀಟ್ ಶಾಪಿಂಗ್ ಮಾಡೋ ವೇಳೆ, ಕಡಿಮೆ ಬೆಲೆಗೆ ಬ್ರಾಂಡೆಡ್ ಬ್ಯೂಟಿ ಪ್ರಾಡಕ್ಟ್ ಸಿಗುತ್ತದೆ. ಗಾಂಧಿನಗರ ಉಪ್ಪಾರಲೇಟೆ, ಮಲ್ಲೇಶ್ವರ , ಮೆಜೆಸ್ಟಿಕ್ಸೇರಿದಂತೆ ಕೆಲ ಏರಿಯಾಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬ್ರಾಂಡೆಡ್ ಹೆಸರಲ್ಲಿ ಚೀಪ್ ಬ್ಯೂಟಿ ಪ್ರಾಡಕ್ಟ್ ಗಳ ಮಾರಾಟ ಮಾಡಲಾಗುತ್ತಿದೆ.
ಇದು ಪಕ್ಕಾ ನಿಮ್ಮ ಸ್ಕಿನ್ ಹಾನಿಕಾರಕಬಾಷ್ಟೇ ಅಲ್ಲ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ. ಸ್ಟ್ರೀಟ್ ಶಾಪಿಂಗ್ ಮಾಡುವಾಗ ಸಾಕಷ್ಟು ಹೆಣ್ಣುಮಕ್ಕಳು ಕಡಿಮೆ ಬೆಲೆಯಲ್ಲಿ ಬ್ರ್ಯಾಂಡ್ ಬ್ಯೂಟಿ ಪ್ರಾಡೆಕ್ಟ್ ಸಿಗುತ್ತಿದೆ. ಅಥವಾ ಅರ್ಥಕ್ಕೆ ಅರ್ದ ಬೆಲೆಯಲ್ಲಿ ಒಳ್ಳೆ ಸೌಂದರ್ಯವರ್ಧಕ ಸಿಗುತ್ತೆ ಅನೋ ಆಸೆಯಲ್ಲಿ ಬೀದಿ ಬದಿಯಲ್ಲಿ ಮಾರಾಟಕ್ಕಿಟ್ಟಿರುವ ಕಾಜಲ್, ಫೌಂಡೇಶನ್ , ಕ್ರೀಮ್, ಲಿಪ್ ಸ್ಟಿಕ್, ಬ್ಲುಷ್ ಸೇರಿದಂತೆ ನಾನಾ ಬ್ಯೂಟಿ ಪ್ರಾಡೆಕ್ಟ್ಗಳನ್ನು ಖರೀದಿ ಮಾಡುತ್ತಾರೆ..ಸದ್ಯ ಇದು ಕ್ಯಾನ್ಸರ್ ಮಾರಾಕ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.