ಹೀಗಿನ ಕಾಲದ ಲವ್ ಟೈಮ್ ಪಾಸ್ ಆಗ್ಬಿಟ್ಟಿದೆ ಮರ್ರೆ. ಇವರಿಲ್ಲ ಅಂದ್ರೆ ಇನ್ನೊಬ್ರು ಅವರಿಲ್ಲ ಅಂದ್ರೆ ಮತ್ತೊಬ್ಬರು ಎನ್ನುವಂತಾಗಿದೆ. ಹೀಗಿನ ಲವ್ ಗೆ ಗ್ಯಾರಂಟಿ, ವಾರಂಟಿ ಏನು ಇಲ್ಲ..
ಕೆಲವರು ಹುಡುಗಿ ಸಿಕ್ಕಿದ್ದಾಳೆಂದರೆ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರು ಇದ್ದಾರೆ. ಅದಲ್ಲದೇ ಹುಡುಗನಿಗೆ ಮೋಸ ಮಾಡುವವರು ಹುಡುಗಿಯರೂ ಇದ್ದಾರೆ. ಆದರೆ ಪ್ರೇಮಿಯ ನಡವಳಿಕೆ ಈ ರೀತಿಯಾಗಿದ್ದರೆ ಹುಡುಗಿಯರು ಎಷ್ಟು ಹುಷಾರಾಗಿತ್ತಿರೋ ಅಷ್ಟು ಒಳ್ಳೆಯದು.
* ಸಹಾಯ ಎಂದಾಗ ಜಾರಿಕೊಳ್ಳುವುದು : ಸಂಬಂಧದಲ್ಲಿ ಕಷ್ಟದ ಕಾಲದಲ್ಲಿ ಒಬ್ಬರಿಗೆ ಮತ್ತೊಬ್ಬರು ನೆರಳಾಗಿರುವುದು ಮುಖ್ಯ. ನಿಮ್ಮಿಂದ ಪದೇ ಪದೇ ಒಂದಲ್ಲ ಒಂದು ಪಡೆದುಕೊಂಡ ಪ್ರಿಯತಮನು ನೀವು ಕಷ್ಟವೆಂದಾಗ ನಿಮ್ಮ ಜೊತೆಗೆ ನಿಲ್ಲುವುದಿಲ್ಲ. ಆರ್ಥಿಕವಾಗಿ ಯಾವುದೇ ಸಹಾಯ ಮಾಡದೇ ಇದ್ದಾಗ ನಿಮ್ಮನ್ನು ಅತಿ ಮುಖ್ಯವೆಂದು ಆತನು ಪರಿಗಣಿಸಿಲ್ಲ. ಆತನು ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗುತ್ತದೆ.
* ಭವಿಷ್ಯದ ಬಗ್ಗೆ ಚರ್ಚಿಸದೇ ಇರುವುದು : ಸಂಬಂಧದಲ್ಲಿ ಇಬ್ಬರೂ ಕೂಡ ತಮ್ಮ ಭವಿಷ್ಯದ ಬಗ್ಗೆ ಚರ್ಚಿಸುವುದು ಬಹಳ ಮುಖ್ಯವಾಗುತ್ತದೆ. ಆದರೆ ಹುಡುಗಿಯು ತನ್ನ ಹುಡುಗನೊಂದಿಗೆ ಈ ಬಗ್ಗೆ ಚರ್ಚೆ ಮಾಡಲೂ ಪ್ರಯತ್ನಿಸಿದರೂ, ಅದನ್ನು ನಿರ್ಲಕ್ಷ್ಯ ಮಾಡಬಹುದು. ನಿಮ್ಮ ಹುಡುಗನಿಗೆ ಈ ಸಂಬಂಧವನ್ನು ಮುಂದಿನ ಹಂತಕ್ಕೆ ಅಂದರೆ ಮದುವೆವರೆಗೆ ತೆಗೆದುಕೊಂಡು ಹೋಗಲು ಇಷ್ಟವಿಲ್ಲ. ನಿಮ್ಮನ್ನು ಟೈಮ್ ಪಾಸ್ ಗೆಂದು ಲವ್ ಪ್ರೀತಿ ಮಾಡುತ್ತಿದ್ದು, ಈ ಸಂಬಂಧ ತುಂಬಾ ಸಮಯವಿರುವುದು ಎಂದು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು