ಬೆಂಗಳೂರು: ತಪ್ಪು ಮಾಡಿದ್ದಾರೆಂದು ಆರೋಪಿಸಿ ಬೆಂಗಳೂರಿನ ಹೆಗಡೆ ನಗರದಲ್ಲಿರುವ ಮದರಸ ಕಚೇರಿಗೆ ಕರೆದು ಬಾಲಕಿಯರ ಮೇಲೆ ಮಾಡಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಹೆಗಡೆ ನಗರದಲ್ಲಿರುವ ಜಾಮೀಯ ಆಯೀಷ ಸಿದ್ದಿಕಾ ಆಲ್ ಬನಾತ್ನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಮೊಹಮ್ಮದ್ ಹಸನ್ ಅಲಿ ಬಂಧಿತ ಆರೋಪಿಯಾಗಿದ್ದು,
ಮದರಸಾದ ಪ್ರಾಂಶುಪಾಲೆಯ ತಮ್ಮನಾಗಿರುವ ಈತ ಸಲುಗೆಯ ಮೇರೆಗೆ ಮದರಸಾಗೆ ಬಂದಿದ್ದ, ಈ ವೇಳೆ ತಪ್ಪು ಮಾಡಿರುವುದಾಗಿ ಬಾಲಕಿಯರನ್ನು ಕಚೇರಿಗೆ ಕರೆದಿದ್ದು, ಈ ವೇಳೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Turmeric Milk: ಈ ಸಮಸ್ಯೆಗಳಿದ್ದರೆ ತಪ್ಪಿಯೂ ಅರಿಶಿನ ಮಿಶ್ರಿತ ಹಾಲನ್ನು ಕುಡಿಯಬೇಡಿ!
ಈ ವಿಷಯ ತಿಳಿದ ಬಾಲಕಿಯರ ಪೋಷಕರು ಮದರಸಾ ಮುಂದೆ ಗಲಾಟೆ ನಡೆಸಿದ್ದಾರೆ. ಕಮೀಷನರ್, ಎಸಿಪಿ, ಡಿಸಿಪಿ ನ್ಯಾಯ ಕೊಡಿಸಬೇಕು, ಆರೋಪಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ. ಆರೋಪಿಯನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದು, ಬಿಎನ್ಎಸ್ 115, ಅಮಡ್ 75 ಆಫ್ ಜೆಜೆ ಆಕ್ಟ್ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.