ಬೇಗ ಅಡುಗೆ ಮಾಡಬೇಕೆಂದಾಗ ಅಗತ್ಯವಾದ ಬೆಳ್ಳುಳ್ಳಿ ಹಾಗೂ ಶುಂಠಿ ಸಿಪ್ಪೆ ತೆಗೆಯುವುದು ಬಹಳ ಕಷ್ಟದ ಕೆಲಸ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಕೆಲ ಸುಲಭ ವಿಧಾನ ಅನುಸರಿಸಿದರೆ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.
- ಎಳೆ ಶುಂಠಿ ಸಿಪ್ಪೆ ತೆಳು ಇದ್ದರೆ ಬಲಿತ ಶುಂಠಿಯ ಸಿಪ್ಪೆ ದಪ್ಪ ಇರುತ್ತದೆ. ಎಳೆ ಶುಂಠಿಯ ಸಿಪ್ಪೆಯನ್ನು ನಾವು ಕೈ ಬೆರಳು ಸಹಾಯದಿಂದಲೇ ಸುಲಿಯ ಬಹುದು. ಆದರೆ ಬಲಿತ ಶುಂಠಿ ಸಿಪ್ಪೆ ತೆಗೆಯುವುದು ತುಸು ಕಷ್ಟ
- ಶುಂಠಿ ಮಣ್ಣಿನೊಳೆಗ ಬೆಳೆಯುವುದರಿಂದ ಅದರಲ್ಲಿ ಮಣ್ಣು ಹೆಚ್ಚಾಗಿ ಇರುತ್ತದೆ. ಮೊದಲು ಅದನ್ನು ನೀರಿನಲ್ಲಿ ಮಣ್ಣು ಸಂಪೂರ್ಣವಾಗಿ ಹೋಗುವಂತೆ ಚೆನ್ನಾಗಿ ತೊಳೆಯಬೇಕು.
- ಶುಂಠಿಯಲ್ಲಿ ಕವಲುಗಳು ಜಾಸ್ತಿ ಇರುತ್ತದೆ. ಮೊದಲು ಅವುಗಳನ್ನು ಸಣ್ಣ ಸಣ್ಣದಾಗಿ ಬಿಡಿಸಿಕೊಳ್ಳಬೇಕು
- ಅಡುಗೆಗೆ ಮುನ್ನ ಅರ್ಧ ಗಂಟೆ ನೀರಿನಲ್ಲಿ ನೆನೆಸಬೇಕು ಅಥವಾ ಫ್ರಿಡ್ಜ್ನಲ್ಲಿ ಇಡಬೇಕು. ಆಗ ಸಿಪ್ಪೆ ಮೃದುವಾಗುತ್ತದೆ. ಚಾಕು ಸಹಾಯದಿಂದ ಸುಲಭವಾಗಿ ತೆಗೆಯಬಹುದು.
- ಚಾಕು ಅಥವಾ ತರಕಾರಿ ಪೀಲರ್ಗಿಂತ ಚಮಚದಲ್ಲಿ ಸಿಪ್ಪೆಯನ್ನು ಸುಲಭವಾಗಿ ಬಿಡಿಸಬಹುದು.
- ಶುಂಠಿ ಕತ್ತರಿಸುವ ಸಾಧನಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದು ಶುಂಠಿಯ ಮೇಲ್ಪದರ ತೆಗೆಯಲು ತುಂಬಾ ಸುಲಭವಾಗುತ್ತದೆ. ಇದರಿಂದ ಅನಾವಶ್ಯಕವಾಗಿ ವ್ಯರ್ಥವಾಗುವುದನ್ನು ಸಹ ತಪ್ಪಿಸಬಹುದು. ಕತ್ತರಿಸುವ ಸಾಧನಗಳನ್ನು ಬಳಸಿದ ಮಾತ್ರಕ್ಕೆ ಇದರ ರುಚಿ ಹಾಳಾಗುವುದಿಲ್ಲ.