ಪೀಣ್ಯ ದಾಸರಹಳ್ಳಿ:’ ದೂರದ ಊರುಗಳಿಂದ ಬಂದು ದಾಖಲಾದ ಒಳರೋಗಿಗಳನ್ನು ವಿಚಾರಿಸಿ ಅವರಿಗೆ ಧೈರ್ಯ ತುಂಬಿ ಹಣ್ಣು ಹಂಪಲುಗಳನ್ನು ನೀಡುತ್ತಿದ್ದೇವೆ. ಇವರ ಆರೋಗ್ಯ ಬೇಗ ಗುಣಮುಖವಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ”ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಿಜಯಕುಮಾರ್ ಮತ್ತು ಭರತ್ ಸೌಂದರ್ಯ ಅವರ ನೇತೃತ್ವದಲ್ಲಿ ಆಯೋಜಿಸಲಾದ ಶಾಸಕ ಎಸ್. ಮುನಿರಾಜು ಅವರ ‘ಅಭಿಮಾನೋತ್ಸವ’ ಸಮಾರಂಭದಲ್ಲಿ ಸಪ್ತಗಿರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ನೀಡಿ ಮಾತನಾಡಿದರು.
ಸಂಘ ಸಂಸ್ಥೆಗಳು, ಗಣ್ಯರು, ಸಾಹಿತಿಗಳು, ಅಭಿಮಾನಿಗಳು ಆಗಮಿಸಿ ಪುಸ್ತಕಗಳನ್ನು ನೀಡಿ ಶುಭ ಕೋರಿದ್ದಾರೆ. ಈ ಪುಸ್ತಕಗಳನ್ನು ನಾನು ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡುವ ಮೂಲಕ ಪುಸ್ತಕ ಪ್ರೀತಿಯನ್ನು ಬೆಳೆಸಲು ನೆರವಾಗುತ್ತೇನೆ’ ಎಂದರು.
ಕ್ಷೇತ್ರದ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಭರತ್ ಸೌಂದರ್ಯ ಮಾತನಾಡಿ’ ಬೆಳಿಗ್ಗೆಯಿಂದ ಸಾವಿರಾರು ಅಭಿಮಾನಿಗಳು ಪುಸ್ತಕಗಳನ್ನು ನೀಡಿದ್ದಾರೆ. ನಮ್ಮ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ನೇಹಿತರಲ್ಲ ಸೇರಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ರತಿ ವರ್ಷದಂತೆ ಸಪ್ತಗಿರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ನೀಡುತ್ತಿದ್ದೇವೆ. ಈ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿಯಾಗಲಿ. ಮುನಿರಾಜಣ್ಣ ಅವರು ಸಪ್ತಗಿರಿ ಆಸ್ಪತ್ರೆಗೆ ಆಗಮಿಸಿ ಒಳ ರೋಗಿಗಳ ಆರೋಗ್ಯ ವಿಚಾರಿಸಿ ಅವರಿಗೆ ಧೈರ್ಯ ತುಂಬಿ ಹಣ್ಣು ಹಂಪಲುಗಳನ್ನು ನೀಡಿ ಬೇಗ ಗುಣಮುಖವಾಗಲು ಶುಭ ಕೋರಿದರು’ ಎಂದರು.